ರೋಹಿತ್ ಶರ್ಮಾ ದಪ್ಪಗಿದ್ದಾರಂತೆ: ಹಾಗಿದ್ರೆ ರಾಹುಲ್ ಗಾಂಧಿಯೇ ಟೀಂ ಇಂಡಿಯಾ ಕ್ಯಾಪ್ಟನ್ ಆಗ್ತಾರಾ

Krishnaveni K

ಸೋಮವಾರ, 3 ಮಾರ್ಚ್ 2025 (12:29 IST)
Photo Credit: X
ನವದೆಹಲಿ: ಕಾಂಗ್ರೆಸ್ ವಕ್ತಾರೆ ಶಮಾ ಮೊಹಮ್ಮದ್ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ದಪ್ಪಗಿದ್ದಾರೆ ಎಂದು ಟ್ರೋಲ್ ಗೊಳಗಾಗಿದ್ದಾರೆ. ಹಾಗಿದ್ದರೆ ರಾಹುಲ್ ಮುಂದೆ ಟೀಂ ಇಂಡಿಯಾ ನಾಯಕರಾಗುತ್ತಾರಾ ಎಂದು ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ.

ಸೋಷಿಯಲ್ ಮೀಡಿಯಾ ಎಕ್ಸ್ ಪುಟದಲ್ಲಿ ರಾಹುಲ್ ಗಾಂಧಿಯನ್ನು ಹೊಗಳಿ ರೋಹಿತ್ ಶರ್ಮಾರ ಫಿಟ್ನೆಸ್ ಬಗ್ಗೆ ಶಮಾ ವ್ಯಂಗ್ಯ ಮಾಡಿದ್ದರು. ‘ರೋಹಿತ್ ಶರ್ಮಾ ಕ್ರೀಡಾಳುವಾಗಿದ್ದರೂ ತುಂಬಾ ದಪ್ಪಗಿದ್ದಾರೆ. ಅವರು ತಕ್ಷಣವೇ ತಮ್ಮ ತೂಕ ಕಳೆದುಕೊಳ್ಳಬೇಕು. ವಿಶ್ವದ ಕಳಪೆ ನಾಯಕ’ ಎಂದು ಟೀಕಿಸಿದ್ದರು.

ಅವರ ಈ ಹೇಳಿಕೆಗೆ ಸಾಕಷ್ಟು ಆಕ್ರೋಶ ವ್ಯಕ್ತವಾಗಿದೆ. ಟೀಂ ಇಂಡಿಯಾದ ಯಶಸ್ವೀ ನಾಯಕರಲ್ಲಿ ಒಬ್ಬರಾಗಿರುವ, ಹಿಟ್ ಮ್ಯಾನ್ ಎಂದೇ ಖ್ಯಾತರಾಗಿರುವ ರೋಹಿತ್ ಬಗ್ಗೆ ಇಂತಹ ಕೀಳುಮಟ್ಟದ ಹೇಳಿಕೆ ನೀಡಿರುವುದು ಈಗ ರಾಜಕೀಯ ತಿರುವು ಪಡೆದುಕೊಂಡಿದೆ. ಬಿಜೆಪಿ ಕೂಡಾ ಶಮಾ ಹೇಳಿಕೆಗೆ ತಿರುಗೇಟು ನೀಡಿದೆ.

ಹಾಗಿದ್ದರೆ ಕಾಂಗ್ರೆಸ್ ವಕ್ತಾರೆ ಶಮಾ, ರೋಹಿತ್ ಗಿಂತ ರಾಹುಲ್ ಗಾಂಧಿಯೇ ಫಿಟ್. ಅವರೇ ಮುಂದೆ ಟೀಂ ಇಂಡಿಯಾ ನಾಯಕರಾಗಬೇಕು ಎಂದು ನಿರೀಕ್ಷೆ ಮಾಡುತ್ತಿದ್ದಾರಾ ಎಂದು ವ್ಯಂಗ್ಯ ಮಾಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ