ರಾಜ್ಯಸಭಾ ಸದಸ್ಯೆಯಾಗಿ ರೂಪಾ ಗಂಗೂಲಿ ಪ್ರಮಾಣವಚನ

ಶನಿವಾರ, 15 ಅಕ್ಟೋಬರ್ 2016 (11:53 IST)
ನಟಿ ಪರಿವರ್ತಿತ ಬಿಜೆಪಿ ನಾಯಕಿ ರೂಪಾ ಗಂಗೂಲಿ  ರಾಜ್ಯಸಭಾ ಸದಸ್ಯೆಯಾಗಿ ಶುಕ್ರವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ. 
ಇದೇ ಸಂದರ್ಭದಲ್ಲಿ ಬಿಜೆಪಿಯ ಮತ್ತೊಬ್ಬ ನಾಯಕ ಎಲ್, ಗಣೇಶನ್ ಸಹ ಪ್ರಮಾಣವಚನ ಸ್ವೀಕರಿಸಿದ್ದು  ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಪ್ರತಿಜ್ಞಾ ವಿಧಿ ಬೋಧಿಸಿದರು.
 
ಈ ಸಂದರ್ಭದಲ್ಲಿ ಮಾತನಾಡಿದ ರೂಪಾ ಗಂಗೂಲಿ ಈಗ ನನ್ನ ಹೊಣೆಗಾರಿಕೆ ಮತ್ತಷ್ಟು ಹೆಚ್ಚಿದೆ. ನನ್ನ ಅಧಿಕಾರದ ವ್ಯಾಪ್ತಿಯಲ್ಲಿ ಸಾಧ್ಯವಾದಷ್ಟು ಉತ್ತಮ ಕೆಲಸ ಮಾಡಿ ದೇಶದ ಅಭಿವೃದ್ಧಿಗೆ ಶ್ರಮಿಸುವುದಾಗಿ ರೂಪಾ ಹೇಳಿದ್ದಾರೆ. 
 
ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿದ್ದು ಅವರಿಂದ ತೆರವಾದ ರಾಜ್ಯಸಭಾ ಸ್ಥಾನಕ್ಕೆ ರೂಪಾ ಗಂಗೂಲಿ ನೇಮಕವಾಗಿದ್ದಾರೆ.
 
80 ರ ದಶಕದ ಮೆಗಾ  ಧಾರವಾಹಿ ಮಹಾಭಾರತ್‌ನ ದ್ರೌಪದಿಯ ಪಾತ್ರದಿಂದ ಪ್ರಸಿದ್ಧರಾಗಿರುವ ರೂಪಾ ಗಂಗೂಲಿ,  
1990 ಮತ್ತು 2000 ರವರೆಗೆ ಅನೇಕ ಬಾಲಿವುಡ್ ಮತ್ತು ಹಿಂದಿ ಚಿತ್ರಗಳಲ್ಲಿ ನಟಿಸಿದ್ದಾರೆ. ಕಳೆದ ವರ್ಷ ಗಂಗೂಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದ ಅವರು ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಟಿಕೆಟ್‌ನಿಂದ ಸ್ಪರ್ಧಿಸಿ ತೃಣಮೂಲ ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಿ ರತನ್ ಶುಕ್ಲಾ ವಿರುದ್ಧ ಸೋಲನುಭವಿಸಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ