ನೊಬೆಲ್ ಪ್ರಶಸ್ತಿ ಪಡೆದಲ್ಲಿ 100 ಕೋಟಿ ರೂ. ಬಹುಮಾನ: ಸಿಎಂ ಚಂದ್ರಬಾಬು ನಾಯ್ಡು ಘೋಷಣೆ

ಗುರುವಾರ, 5 ಜನವರಿ 2017 (14:11 IST)
ಆಂಧ್ರಪ್ರದೇಶ ಮೂಲದ ಯಾವುದೇ ವ್ಯಕ್ತಿ ನೊಬೆಲ್ ಪ್ರಶಸ್ತಿಯನ್ನು ಪಡೆದಲ್ಲಿ ಅಂತಹ ವ್ಯಕ್ತಿಗೆ 100 ಕೋಟಿ ರೂಪಾಯಿಗಳ ನಗದು ಬಹುಮಾನ ಕೊಡುವುದಾಗಿ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಘೋಷಿಸಿದ್ದಾರೆ.
 
ತಿರುಪತಿಯಲ್ಲಿ ಶ್ರೀ ಪದ್ಮಾವತಿ ಮಹಿಳೆ ವಿಶ್ವನಿದ್ಯಾಲಯದಲ್ಲಿ ಆಯೋಜಿಸಲಾದ ನ್ಯಾಷನಲ್ ಚಿಲ್ಡರ್ನ್ಸ್ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮಕ್ಕಳು ತಮ್ಮ ಕೆಲಸವನ್ನು ಗೌರವಿಸಿ, ಕಠಿಣ ಪರಿಶ್ರಮ ಪಡಬೇಕು.ಸಣ್ಣ ಸಂಶೋಧನೆ ಮುಂದೊಂದು ದಿನ ವಿಶ್ವಕ್ಕೆ ವರದಾನವಾಗಬಹುದು ಎಂದು ಸಲಹೆ ನೀಡಿದರು.  
 
ಇದೇ ಸಂದರ್ಭದಲ್ಲಿ ಭೌತವಿಜ್ಞಾನದಲ್ಲಿ 2015ರ ನೊಬೆಲ್ ಪ್ರಶಸ್ತಿ ವಿಜೇತ ಪಡೆದ ಜಪಾನ್ ಮೂಲದ ಪ್ರೊಫೆಸರ್ ತಾಕಾಕಿ ಕಜಿತಾ ಅವರನ್ನು ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಗೌರವಿಸಿದರು. ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ ಕೇಂದ್ರದ ರಾಜ್ಯ ಸಚಿವರಾದ ವೈ.ಎಸ್.ಚೌಧರಿ ಕೂಡಾ ಸಭೆಯಲ್ಲಿ ಮಾತನಾಡಿದರು.  

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ