ಭಾರತಕ್ಕೆ ಸವಾಲೊಡ್ಡಿದ್ದ ರಷ್ಯಾದ ಲೂನಾ-25 ಮಿಷನ್ ವಿಫಲ

ಸೋಮವಾರ, 21 ಆಗಸ್ಟ್ 2023 (07:26 IST)
ಚಂದ್ರಯಾನದ ವಿಚಾರದಲ್ಲಿ ಭಾರತಕ್ಕೆ ರಷ್ಯಾ ಸವಾಲೊಡ್ಡಿತ್ತು. ಭಾರತದ ವಿಕ್ರಮ್ ಲ್ಯಾಂಡಿರ್ ಚಂದ್ರನ ತಲುಪುವ ಮುನ್ನ ರಷ್ಯಾ ತನ್ನ ಲೂನ್-25 ಅನ್ನು ಚಂದ್ರನ ದಕ್ಷಿಣ ಭಾಗದಲ್ಲಿ ಇಳಿಸುವ ಲೆಕ್ಕಚಾರ ಹಾಕಿಕೊಂಡಿತ್ತು.

ಆ ಮೂಲಕ ವಿಶೇಷ ಸಾಧನೆಗೆ ರಷ್ಯಾ ಭಾಗಿಯಾಗಲು ಭಾರತದ ವಿರುದ್ಧ ಸ್ಪರ್ಧೆಗೆ ನಿಂತಿತ್ತು. ಆದರೆ ಲೂನಾ-25 ಬಾಹ್ಯಾಕಾಶ ನೌಕೆಯು ಶನಿವಾರದಂದು ತನ್ನ ಪೂರ್ವ ಲ್ಯಾಂಡಿಂಗ್ ಕಕ್ಷೆಯಲ್ಲಿ ಸ್ಥಾನ ಪಡೆಯುತ್ತಿದ್ದಂತೆ ತಾಂತ್ರಿಕ ಕಾರಣಗಳಿಂದ ದುರಂತದ ವೈಫಲ್ಯವನ್ನು ಎದುರಿಸಿದೆ.

ರೋಸ್ಕೋಸ್ಮೋಸ್ ಬಿಡುಗಡೆ ಮಾಡಿದ ಹೇಳಿಕೆ ಪ್ರಕಾರ, ಕಾರ್ಯಾಚರಣೆಯ ನಿರ್ಣಾಯಕ ಹಂತದಲ್ಲಿ ಅನಿರೀಕ್ಷಿತ ಸಮಸ್ಯೆಯಿಂದಾಗಿ ಬಾಹ್ಯಾಕಾಶ ನೌಕೆಯೊಂದಿಗಿನ ಸಂಪರ್ಕವು ಕಳೆದುಹೋಗಿದ್ದು ಮಿಷನ್ ವಿಫಲವಾಗಿದೆ ಎಂದು ಘೋಷಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ