ಶಬರಿಮಲೆಗೆ ಮಹಿಳೆಯರ ಪ್ರವೇಶ ವಿಚಾರ; ಎಲ್​ಡಿಎಫ್ ಹಾಗೂ ಯುಡಿಎಫ್​ ಅನ್ನು ತರಾಟೆಗೆ ತೆಗೆದುಕೊಂಡ ಪ್ರಧಾನಿ

ಬುಧವಾರ, 16 ಜನವರಿ 2019 (07:41 IST)
ನವದೆಹಲಿ : ಶಬರಿಮಲೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಧಾನಿ ಮೋದಿಯವರು  ಎಲ್​ಡಿಎಫ್​ ಮತ್ತು ವಿರೋಧ ಪಕ್ಷದಲ್ಲಿರುವ ಕಾಂಗ್ರೆಸ್​ ನೇತೃತ್ವದ ಯುಡಿಎಫ್​ ಅನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.




ಕೇರಳದ ಕೊಲ್ಲಂನಲ್ಲಿ ಮಾತನಾಡಿದ ಮೋದಿಯವರು,’ಶಬರಿಮಲೆ ವಿಚಾರದಲ್ಲಿನ ಸಿಪಿಎಂ ನೇತೃತ್ವದ ಎಲ್.​ಡಿ.ಎಫ್​ ಸರ್ಕಾರದ ನಡೆ ಇತಿಹಾಸಕ್ಕೆ ಕುಂದುಂಟು ಮಾಡಿದೆ. ಅದರ ನಡವಳಿಕೆ ಹಿಂದಿನ ಯಾವುದೇ ಸರ್ಕಾರಕ್ಕಿಂತಲೂ ನಾಚಿಕೆಗೇಡಿನದ್ದಾಗಿದೆ’ ಎಂದು ಹೇಳಿದ್ದಾರೆ.

‘ಆಡಳಿತಾರೂಢ ಸಿಪಿಐ (ಎಂ) ನೇತೃತ್ವದ ಎಲ್‌.ಡಿ.ಎಫ್‌ ಮತ್ತು ಕಾಂಗ್ರೆಸ್‌ ನೇತೃತ್ವದ ಯುಡಿಎಫ್‌ ಒಂದೇ ನಾಣ್ಯದ ಎರಡು ಮುಖಗಳು. ಇವು ಮೇಲ್ನೋಟಕ್ಕೆ ಪರಸ್ಪರ ಕಿತ್ತಾಡಿದಂತೆ ಕಾಣಿಸಿದರೂ ಅದು ನಿಜವಲ್ಲ. ಪರಮ ಸ್ವಾರ್ಥ ಮತ್ತು ಜನರ ಕಡೆಗಣನೆ ವಿಷಯದಲ್ಲಿ ಈ ಎರಡೂ ಮೈತ್ರಿಕೂಟಗಳ ಧೋರಣೆ ಒಂದೇ ಆಗಿದೆ’ ಎಂದು ಅವರು ಕಿಡಿಕಾರಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ