ಕಾಂಗ್ರೆಸ್ ನ ಯಾವ ಅತೃಪ್ತ ಶಾಸಕರ ಜೊತೆಗೂ ಸಂಪರ್ಕವಿಲ್ಲ- ಯಡಿಯೂರಪ್ಪ

ಭಾನುವಾರ, 13 ಜನವರಿ 2019 (10:47 IST)
ನವದೆಹಲಿ : ಕಾಂಗ್ರೆಸ್ ನ ಯಾವ ಅತೃಪ್ತ ಶಾಸಕರ ಜೊತೆಗೂ ಸಂಪರ್ಕವಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಖಡಕ್ ಆಗಿ  ಹೇಳಿದ್ದಾರೆ.


ದೆಹಲಿಯಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು,’ನವದೆಹಲಿಗೆ ಯಾರು ಬಂದಿದ್ದಾರೆ ಎಂದು ನನಗೆ ಗೊತ್ತಿಲ್ಲ. ಕಾಂಗ್ರೆಸ್ ನಲ್ಲಿ ಅತೃಪ್ತರು ಯಾರಿದ್ದಾರೆ ಅವರ ಹೆಸರು ಹೇಳಿ. ಹಾಗೇ ದೆಹಲಿಗೆ ಬಂದಿರುವ ಶಾಸಕರ ಹೆಸರು ಹೇಳಿ. ನೀವು ಹೆಸರು ಹೇಳಿದರೆ ನಾನೇ ಭೇಟಿಯಾಗುತ್ತೇನೆ.  ಅತೃಪ್ತ ಶಾಸಕರು ದೆಹಲಿಗೆ ಬಂದಿರುವ ಯಾವ ಸುಳಿವೂ ಇಲ್ಲ. ಆದ್ದರಿಂದ ನೀವು ಅವರ ಹೆಸರು ಹೇಳಿ, ಭೇಟಿಯಾಗ್ತೀನಿ’ ಎಂದು ಹೇಳಿದ್ದಾರೆ.


‘ಸಂಕ್ರಾಂತಿ ನಂತರದ ಶುಭ ಸುದ್ಧಿಗೂ ನಮಗೂ ಸಂಬಂಧವಿಲ್ಲ. ಇಂದು, ನಾಳೆ ದೆಹಲಿಯ ಸಭೆಗೆ ನಮ್ಮ ಶಾಸಕರು ಬಂದಿದ್ದಾರೆ. ಸಭೆ ಇಂದೇ ಮುಗಿದರೆ ನಾವು ಇಂದೇ ವಾಪಾಸ್ ಹೋಗುತ್ತೇವೆ. ಲೋಕಸಭಾ ಚುನಾವಣೆಗೆ ದೆಹಲಿಯಲ್ಲಿ ಸಿದ್ಧತಾ ಸಭೆ ನಡೆಯುತ್ತಿದೆ. ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಸಂಬಂಧ ಚರ್ಚೆ ನಡೆಸುತ್ತಿದ್ದೇವೆ. ನಮ್ಮ ಶಾಸಕರಿಗೆ ಏನು ಹೇಳಬೇಕೋ ಅದನ್ನು ನಾವು ಹೇಳ್ತೀವಿ’ ಎಂದು ಅವರು ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ