ನೋಟು ನಿಷೇಧ: ಉ ಪ್ರದಲ್ಲಿ ಉಪ್ಪಿನ ಬೆಲೆ 400ಕ್ಕೆ ಏರಿಕೆ

ಶನಿವಾರ, 12 ನವೆಂಬರ್ 2016 (09:42 IST)
ಪ್ರಧಾನಿ ಮೋದಿ ದಿಢೀರನೆ 500 ಮತ್ತು 1,000 ಮುಖಬೆಲೆ ನೋಟುಗಳನ್ನು ನಿಷೇಧಗೊಳಿಸಿರುವುದು ದೇಶಾದ್ಯಂತ ಸಾಮಾನ್ಯ ಜನಜೀವನದ ಮೇಲೆ ಗಂಭೀರ ಪರಿಣಾಮವನ್ನು ಬೀರಿದೆ. ಹಣ ವಿನಿಮಯ ಮಾಡಿಕೊಳ್ಳಲು ಜನರು ಪರದಾಡುತ್ತಿದ್ದಾರೆ. ಕೇಂದ್ರ ಸರ್ಕಾರದ ಈ ನಡೆಯ ಪರಿಣಾಮ ಜನರು ವಿಭಿನ್ನ ಸಂಕಷ್ಟಗಳನ್ನು ಎದುರಿಸುತ್ತಿದ್ದು ಉತ್ತರ ಪ್ರದೇಶದಲ್ಲಿ ಉಪ್ಪಿನ ಬೆಲೆ ಗಗನಕ್ಕೆ ಏರಿದೆ ಎಂಬ ವದಂತಿ ಹರಡಿ 20 ರೂಪಾಯಿ ಉಪ್ಪು 400 ರೂಪಾಯಿಗೆ ಏರಿಕೆಯಾಗಿದ್ದು ಜನಸಾಮಾನ್ಯರು ಪರದಾಡುತ್ತಿದ್ದಾರೆ.

ಹೌದು ಶುಕ್ರವಾರ ಯುಪಿಯ ಅನೇಕ ನಗರಗಳಲ್ಲಿ ಉಪ್ಪಿನ ಬೆಲೆ ಏಕಾಏಕಿ 400 ರೂಪಾಯಿಗಳವರೆಗೆ ಏರಿತ್ತು. ಉಪ್ಪಿನ ದಾಸ್ತಾನು ಕಡಿಮೆ ಇದೆ ಎಂಬ ವದಂತಿ ಹರಡಿದ ಹಿನ್ನೆಲೆಯಲ್ಲಿ ಈ ಏರಿಕೆ ಕಂಡುಬಂದಿದ್ದು ಅಂಗಡಿಗಳ ಮುಂದೆ ಜನರು ಕ್ಯೂ ನಿಂತು ನೂಕುನುಗ್ಗಲಿನಲ್ಲಿ ಒದ್ದಾಡುತ್ತ ಉಪ್ಪು ಖರೀದಿಸಲು ಮುಗಿ ಬಿದ್ದ ದೃಶ್ಯ ಕಂಡುಬಂತು. 
 
ಆದರೆ ಇದು ವದಂತಿ ಎಂಬುದು ತದನಂತರ ಬಯಲಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಯುಪಿ ಮುಖ್ಯಮಂತ್ರಿ ಅಖಿಲೇಶ್ ಯಾದವ್, ರಾಜ್ಯದಲ್ಲ ಉಪ್ಪಿನ ಕೊರತೆ ಇಲ್ಲ. ಜನರು ವದಂತಿಗಳಿಗೆ ಕಿವಿಗೊಡಬಾರದು ಎಂದಿದ್ದಾರೆ. 

 ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ