ಪ್ರಧಾನಿ, ಶಾ ತಲೆ ಕಡಿದವರಿಗೆ ಬಹುಮಾನ ಘೋಷಿಸಿದ ಎಸ್‌ಪಿ ನಾಯಕ (ವಿಡಿಯೋ)

ಶನಿವಾರ, 10 ಡಿಸೆಂಬರ್ 2016 (12:22 IST)
ನೋಟು ರದ್ಧತಿಯ ಮೂಲಕ ದೇಶದಲ್ಲಿ ತುರ್ತುಪರಿಸ್ಥಿತಿ ಸನ್ನಿವೇಶವನ್ನು ನಿರ್ಮಿಸಿರುವುದಕ್ಕೆ ಮತ್ತು 2002ರ ಗೋಧ್ರಾ ಗಲಭೆಗೆ ಕಾರಣರಾಗಿರುವ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರ ತಲೆ ಕಡಿದವರಿಗೆ ಸೂಕ್ತ ಬಹುಮಾನವನ್ನು ನೀಡುವುದಾಗಿ ಸಮಾಜವಾದಿ ನಾಯಕ ತರುಣ್ ದಿಯೋ ಯಾದವ್ ಘೋಷಿಸಿದ್ದಾರೆ. 
ಇವರು ಭಾಗ್ಪತ್ ಜಿಲ್ಲೆಯ ಸಮಾಜವಾದಿ ಯುವ ಘಟಕದ ಮಾಜಿ ಅಧ್ಯಕ್ಷರಾಗಿದ್ದಾರೆ. 
 
ಸಮಾಜವಾದಿ ಪಕ್ಷದ ರಾಜ್ಯಾಧ್ಯಕ್ಷ ಮುಲಾಯಂ ಸಿಂಗ್ ಯಾದವ್ ಅವರ ಸಹೋದರ ಶಿವಪಾಲ್ ಯಾದವ್ ಈ ತಿಂಗಳ ಆರಂಭದಲ್ಲಿ ಪಕ್ಷದ ಎಲ್ಲಾ ಜಿಲ್ಲಾ ಘಟಕಗಳನ್ನು ಬರ್ಖಾಸ್ತುಗೊಳಿಸಿದ್ದರು. ಹೀಗಾಗಿ ಅವರೀಗ ತಮ್ಮ ಸ್ಥಾನವನ್ನು ಕಳೆದುಕೊಂಡಿದ್ದಾರೆ. ಆದರೆ ಡಿಸೆಂಬರ್ 7 ರಂದು ತರುಣ್ ಹೆಡ್ ಒಂದರಲ್ಲಿ ಈ ಘೋಷಣೆಯನ್ನು ಮಾಡಿದ್ದಾರೆ. ಈ ಲೆಟರ್ ಹೆಡ್ ಅಡಿಯಲ್ಲಿ ತರುಣ್ ದಿಯೋ ಯಾದವ್, ಸಮಾಜವಾದಿ ಪಕ್ಷ ಯುವಜನ ಸಭಾ ಜಿಲ್ಲಾಧ್ಯಕ್ಷ ಎಂದು ಬರೆಯಲಾಗಿತ್ತು. 
 
ಅದಷ್ಟಲ್ಲದೆ, ಶುಕ್ರವಾರ ವೈರಲ್ ಆಗಿರುವ ವಿಡಿಯೋ ಒಂದರಲ್ಲಿ ತರುಣ್  ತಮ್ಮ ಜಿಲ್ಲೆಗೆ ಬಂದು ಪ್ರಚಾರ ಮಾಡಿ ನೋಡಿ ಎಂದು ಮೋದಿ ಮತ್ತು ಶಾಗೆ ಸವಾಲು ಹಾಕಿದ್ದಾನೆ. ಜತೆಗೆ ತಾವು ಬರೆದ ಲೆಟರ್ ಹೆಡ್‌ನ್ನು ಓದಿದ್ದಾರೆ. 
 
ನೋಟು ರದ್ಧತಿಯಿಂದ ಕೂಲಿ ಕಾರ್ಮಿಕರು ಮತ್ತು ಜನಸಾಮಾನ್ಯರು ಎದುರಿಸುತ್ತಿರುವ ಸಮಸ್ಯೆಗಳನ್ನು ಎತ್ತಿ ಹೇಳಿರುವ ಅವರು ತಮ್ಮ ಯುವ ಘಟಕ ಪ್ರಧಾನಿ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸುವುದಾಗಿ ಹೇಳಿದ್ದಾರೆ. 
 
ಈ ಕುರಿತು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶಂಕರ್ ರೈ ಅವರನ್ನು ಸಂಪರ್ಕಿಸಲಾಗಿ, ತರುಣ್ ವಿರುದ್ಧ ಆದಷ್ಟು ಬೇಗ ಎಫ್ಐಆರ್ ದಾಖಲಿಸುವುದಾಗಿ ಹೇಳಿದ್ದಾರೆ.

ಪ್ರಧಾನಿ, ಶಾ ತಲೆ ಕಡಿದವರಿಗೆ ಬಹುಮಾನ (ವಿಡಿಯೋ)



ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
 

ವೆಬ್ದುನಿಯಾವನ್ನು ಓದಿ