ಸನತ್ ಜಯಸೂರ್ಯರ ಖಾಸಗಿ ವಿಡಿಯೋ ಲೀಕ್

ಭಾನುವಾರ, 28 ಮೇ 2017 (11:26 IST)
ಕೊಲಂಬೊ:ಶ್ರೀಲಂಕಾ ಕ್ರಿಕೆಟ್ ತಂಡದ ಮಾಜಿ ನಾಯಕ ಸನತ್ ಜಯಸೂರ್ಯ ತಮ್ಮ ಮಾಜಿ ಗೆಳತಿಯೊಂದಿಗೆ ಏಕಾಂತದಲ್ಲಿ ಕಳೆದಿದ್ದ ಅಶ್ಲೀಲ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
 
ಈ ವಿಡಿಯೋದಲ್ಲಿರುವ ಜಯಸೂರ್ಯ ಅವರ  ಮಾಜಿ ಗೆಳತಿ ಪ್ರತಿಕ್ರಿಯಿಸಿದ್ದು ಜಯಸೂರ್ಯ ನನ್ನ ವಿರುದ್ಧ ಸೇಡು ತೀರಿಸಿಕೊಳ್ಳುವುದಕ್ಕಾಗಿ ಹೀಗೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. 
 
ನಾವು ಪ್ರೀತಿಸುತ್ತಿದ್ದಾಗ ಈ ವಿಡಿಯೋವನ್ನು ಚಿತ್ರೀಕರಿಸಲಾಗಿತ್ತು. ನನ್ನೊಂದಿಗೆ ಜಗಳವಾಡಿಕೊಂಡು ಅವರು ದೂರವಾದರು. ಈಗ ನನ್ನ ಮರ್ಯಾದೆ ಹಾಳು ಮಾಡಲು ಹೀಗೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. 
 

ವೆಬ್ದುನಿಯಾವನ್ನು ಓದಿ