ತಮಿಳುನಾಡಿನ ಪಳನಿಸ್ವಾಮಿ ಸರ್ಕಾರಕ್ಕೆ ಮರ್ಮಾಘಾತ ನೀಡಿದ ದಿನಕರನ್

ಮಂಗಳವಾರ, 22 ಆಗಸ್ಟ್ 2017 (14:28 IST)
ಎಲ್ಲವೂ ಸರಿಹೋಯಿತು ಎನ್ನುವಷ್ಟರಲ್ಲಿ ತಮಿಳುನಾಡು ರಾಜಕೀಯದಲ್ಲಿ ಮತ್ತೆ ಬಿರುಗಾಳಿ ಬೀಸಿದೆ. ಪಕ್ಷದಲ್ಲಿ ಮೂಲೆಗುಂಪಾಗಿರುವ ಶಶಿಕಲಾ ಆಪ್ತ ಟಿಟಿವಿ ದಿನಕರನ್ 19 ಶಾಸಕರನ್ನ ರಾಜ್ಯಪಾಲರ ಬಳಿಗೆ ಕರೆದೊಯ್ದು ಸಿಎಂ ಪಳನಿಸ್ವಾಮಿಗೆ ನಮ್ಮ ಬೆಂಬಲವಿಲ್ಲ ಎಂದು ತಿಳಿಸಿದ್ಧಾರೆ.
 

 ನಿನ್ನೆ ತಾನೇ  ಸಿಎಂ ಪಳನಿಸ್ವಾಮಿ ಮತ್ತು ಪನ್ನೀರ್ ಸೆಲ್ವಂ ಹಸ್ತಲಾಘವ ಮಾಡುವ ಮೂಲಕ ಎರಡೂ ಬಣಗಳನ್ನ ವೀಲಿನಗೊಳಿಸಲಾಗಿತ್ತು. ಬಳಿಕ ಪನ್ನೀರ್ ಸೆಲ್ವಂ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಆದರೆ, ಇದೀಗ ದಿನಕರನ್ ದಂಡು ಕಟ್ಟಿಕೊಂಡು ರಾಜಭವನಕ್ಕೆ ದಾಂಗುಡಿ ಇಡುವ ಮೂಲಕ ಹೊಸ ಸಮಸ್ಯೆಗೆ ದಾರಿ ಮಾಡಿದ್ದಾರೆ.

ನಮ್ಮ 19 ಶಾಸಕರ ವಬೆಂಬಲ ಪಳನಿಸ್ವಾಮಿಗೆ ಇಲ್ಲ. ಹೀಗಾಗಿ, ಪಳನಿಸ್ವಾಮಿ ನೇತ್ಋತ್ವದ ಸರ್ಕಾರಕ್ಕೆ ಬಹುಮತ ಇಲ್ಲ.  ಆದರೆ, ಅವಿಶ್ವಾಸ ನಿರ್ಣಯ ಮಂಡಿಸುವುದು ನಮ್ಮ ಉದ್ಧೇಶ ಎಂಬ ಬಗ್ಗೆ ದಿನಕರನ್ ಟೀಮ್ ರಾಜ್ಯಪಾಲರಿಗೆ ಸೂಚಿಸಿದ್ದಾರೆಯೇ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ. ವರದಿಗಳ ಪ್ರಕಾರ, ದಿನಕರನ್ ನೇತೃತ್ವದಲ್ಲಿ ಗವರ್ನರ್ ಭೇಟಿ ಮಾಡಿದ್ದ ಶಾಸಕರು ಚೆನ್ನೈ ಬಿಟ್ಟು ಹೊರಗೆ ತೆರಳಿದ್ದಾರೆ. ಪಳನಿಸ್ವಾಮಿ ಬಣ ಻ವರನ್ನ ಸೆಳೆಯದಂತೆ ರೆಸಾರ್ಟ್`ಗೆ ಕೊಂಡೊಯ್ದಿರುವ ಸಾಧ್ಯತೆ ಇದೆ ಎನ್ನಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ