ನವದೆಹಲಿ: ದೆಹಲಿ ಮತ್ತು ಎನ್ ಸಿಆರ್ ಪ್ರದೇಶದಲ್ಲಿ ಪಟಾಕಿ ಸಿಡಿಸುವುದು ನಿಷೇಧ ಮಾಡಿರುವಂತೆ ಸುಪ್ರೀಂಕೋರ್ಟ್ ಆದೇಶ ನೀಡಿದೆ. ಆದರೆ ಈ ಆದೇಶವನ್ನು ಮಾರ್ಪಡಿಸಲು ಸುಪ್ರೀಂಕೋರ್ಟ್ ನಿರಾಕರಿಸಿದೆ. ನ್ಯಾಯಾಲಯದ ತೀರ್ಪನ್ನು ರಾಜಕೀಯಗೊಳಿಸಬಾರದು ಎಂದು ಹೇಳಿದೆ.
ತೀರ್ಪಿನ ಬಗ್ಗೆ ಕೋಮುವಾದದ ಟೀಕೆಗಳು ಕೇಳಿ ಬರುತ್ತಿವೆ. ಪಟಾಕಿ ನಿಷೇಧಕ್ಕೆ ಕೋಮುವಾದದ ಲೇಪವ ಮಾಡುವುದು ಬೇಡ. ಇದನ್ನು ರಾಜಕೀಯಗೊಳಿಸಬೇಡಿ ಎಂದು ನ್ಯಾಯಾಲಯ ಹೇಳಿದೆ.
ದೆಹಲಿ-ಎನ್ ಸಿಆರ್ ನಲ್ಲಿ ಪಟಾಕಿ ಮಾರಾಟ ನಿಷೇಧವನ್ನು ಜಾರಿಗೆ ತರಲು ನ್ಯಾಯಾಲಯ ದೆಹಲಿಯ ಪೊಲೀಸರಿಗೆ ನಿರ್ದೇಶನ ನೀಡಿದೆ. ಆದೇಶ ನೀಡುವುದಕ್ಕೂ ಮೊದಲು ಪಟಾಕಿ ಖರೀದಿಸಿರುವವರು ದೀಪಾವಳಿಯಂದು ಪಟಾಕಿ ಸಿಡಿಸಲು ಯಾವುದೇ ನಿರ್ಬಂಧ ಹೇರಿಲ್ಲ.
ತಾತ್ಕಾಲಿಕ ಪರವಾನಗಿ ಹೊಂದಿರುವವರು ದೆಹಲಿ ಮತ್ತು ಎನ್ ಸಿಆರ್ ನಲ್ಲಿ ಪಟಾಕಿ ಮಾರಾಟ ಮಾಡದಂತೆ ನಿಷೇಧಿಸಿರುವ ಆದೇಶವನ್ನು ಸಡಿಲಗೊಳಿಸುವಂತೆ ಸುಪ್ರೀಂಕೋರ್ಟ್ ಗೆ ಮನವಿ ಮಾಡಿದ್ದರು.