ಕರ್ಣನ್ ಜಾಮೀನಿಗೆ ಸಂಬಂಧಿಸಿದ ತುರ್ತು ವಿಚಾರಣೆ ತಿರಸ್ಕರಿಸಿದ ಸುಪ್ರೀಂ

ಸೋಮವಾರ, 3 ಜುಲೈ 2017 (12:50 IST)
ನವದೆಹಲಿ:ನ್ಯಾಯಾಲಯ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲುಪಾಲಾಗಿರುವ ಕೊಲ್ಕತ್ತ ಹೈಕೋರ್ಟ್ ನ ಮಾಜಿ ನ್ಯಾಯಾಧೀಶ ಜಸ್ಟಿಸ್ ಸಿ ಎಸ್ ಕರ್ಣನ್ ಜಾಮೀನು ಕೋರಿಕೆ ಹಾಗೂ ಜೈಲುಶಿಕ್ಷೆ ಆದೇಶ ಹಿಂಪಡೆಯಬೇಕೆಂದು ಸಲ್ಲಿಸಿರುವ ತುರ್ತು ವಿಚಾರಣೆಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.
 
ಜೂ.20ರಂದು ಕರ್ಣನ್ ಅವರನ್ನು ಕೊಯಮತ್ತೂರಿನಲ್ಲಿ ಬಂಧಿಸಲಾಗಿತ್ತು. ಕರ್ಣನ್ ಅರ್ಜಿ ವಿಚಾರಣೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಜಸ್ಟಿಸ್ ಜೆ ಎಸ್ ಖೇಹರ್ ಹಾಗೂ ಜಸ್ಟಿಸ್ ಡಿ ವೈ ಚಂದ್ರಚೂಡ್ ಅವರನ್ನೊಳಗೊಂಡ ನ್ಯಾಯಪೀಠ, ತುರ್ತು ವಿಚಾರಣೆಯ ನಿಮ್ಮ ಕೋರಿಕೆಯನ್ನು ಮನ್ನಿಸಲಾಗದು ಎಂದು ಖಡಕ್ ಅಗಿ ಹೇಳಿದೆ.
 
ಕರ್ಣನ್ ಪರ ವಕೀಲ ಮ್ಯಾಥ್ಯೂ ಜೆ ನೆಡುಂಪರಾ ಕರ್ಣನ್‌ ಅವರು ಪ್ರಕೃತ ಜೈಲು ಶಿಕ್ಷೆಯನ್ನು ಅನುಭವಿಸುತ್ತಿದ್ದಾರೆ; ಜಾಮೀನು ಕೋರಿಕೆಯ ಹಾಗೂ ತನಗಾಗಿರುವ ಜೈಲು ಶಿಕ್ಷೆಯ ಆದೇಶವನ್ನು ಹಿಂಪಡೆಯಬೇಕೆಂಬ ಅವರ ಅರ್ಜಿಯ ತ್ವರಿತ ವಿಚಾರಣೆ ನಡೆಸುವಂತೆ ಮನವಿ ಮಾಡಿದ್ದರು.
 

ವೆಬ್ದುನಿಯಾವನ್ನು ಓದಿ