ಫುಟ್ ಪಾತ್ ಮೇಲೆ ಮಲಗಿದ್ದವರ ಮೇಲೆ ಕಾರು ಹರಿಸಿದ ವಿದ್ಯಾರ್ಥಿಗಳು: 1 ಸಾವು

ಗುರುವಾರ, 20 ಏಪ್ರಿಲ್ 2017 (12:15 IST)
ದೆಹಲಿಯ ಪುಟ್ ಪಾತ್ ಮೇಲೆ ಕಾರು ಹರಿದ ಪರಿಣಾಮ ಪುಟ್ ಪಾತ್ ಮೇಲೆ ಮಲಗಿದ್ದ ವ್ಯಕ್ತಿ ಮೃತಪಟ್ಟು, ಮೂವರು ಗಾಯಗೊಂಡಿರುವ ಘಟನೆ ನವದೆಹಲಿಯ ಕಾಶ್ಮೀರ್ ಗೇಟ್ ಬಳಿ ನಡೆದಿದೆ. ಪ್ರಕರಣ ಸಂಬಂಧ ಪ್ರತಿಷ್ಠಿತ ಶಾಲೆಯ ವಿದ್ಯಾರ್ಥಿ ಸೇರಿ ಮೂವರನ್ನ ಬಂಧಿಸಲಾಗಿದೆ. ಇವರ ಬಳಿ ಡ್ರೈವಿಂಗ್ ಲೈಸೆನ್ಸ್ ಇರಲಿಲ್ಲ ಎಂದು ತಿಳಿದುಬಂದಿದೆ.
 

ಬೆಳಗಿನ ಜಾವ 5.30ರ ಸುಮಾರಿಗೆ ಕಾಶ್ಮೀರಿ ಗೇಟ್ ಬಳಿಯ ೈಎಸ್`ಬಿಟಿ ಬಸ್ ನಿಲ್ದಾಣದಲ್ಲಿ ನಡೆದಿದೆ. 12ನೇ ತರಗತಿ ಪರೀಕ್ಷೆಯಲ್ಲಿ ಪಾಸಾದ ಸಂಭ್ರಮಾಚರಣೆಗೆ ಮೂವರು ಹದಹರೆಯದ ಹುಡುಗರು ಕಾರಿನಲ್ಲಿ ತೆರಳುತ್ತಿದ್ದಾಗ ಈ ಅವಾಂತರ ಮಾಡಿದ್ದಾರೆ.

ಪೊಲೀಸರ ಪ್ರಕಾರ, ಫುಟ್ ಪಾತ್ ಮೇಲೆ ಹರಿದ ಐ20 ಕಾರಿನಲ್ಲಿ ಒಟ್ಟು 4 ಮಂದಿ ಪ್ರತಿಷ್ಠಿತ ಶಾಲಾ ವಿದ್ಯಾರ್ಥಿಗಳಿದ್ದರು. ಪ್ರತ್ಯಕ್ಷದರ್ಶಿಗಳು ಹೇಳುವ ಪ್ರಕಾರ, ವಿದ್ಯಾರ್ಥಿಗಳು ಕಾರನ್ನ ಅತ್ಯಂತ ವೇಗವಾಗಿ ಓಡಿಸುತ್ತಿದ್ದರು. ಫುಟ್ ಪಾತ್ ಮೇಲೆ ಮಲಗಿದ್ದ ವಸತಿರಹಿತರ ಮೇಲೆ ಹರಿಸಿದ್ದಾರೆ.

ವೆಬ್ದುನಿಯಾವನ್ನು ಓದಿ