ಹೆಂಡತಿಗಾಗಿ ಶೌಚಾಲಯ ಕಟ್ಟಲು ಸಾಧ್ಯವಿಲ್ಲ ಎಂದರೆ ಹೆಂಡತಿಯನ್ನೇ ಮಾರಿ ಬಿಡಿ ಎಂದ ಜಡ್ಜ್ ಸಾಹೇಬ್ರು

ಸೋಮವಾರ, 24 ಜುಲೈ 2017 (07:00 IST)
ಔರಂಗಾಬಾದ್:ಹೆಂಡತಿಗಾಗಿ ಶೌಚಾಲಯವನ್ನು ನಿರ್ಮಿಸಲು ಸಾಧ್ಯವಾಗದಿದ್ದರೆ ಹೆಂಡತಿಯನ್ನೇ ಮಾರಿ ಬಿಡಿ ಎಂದು ಬಿಹಾರದ ಔರಂಗಾಬಾದ್ ಜಿಲ್ಲಾ ಮೆಜಿಸ್ಟ್ರೇಟ್ ಕನ್ವಲ್ ತನುಜ್ ವಿವಾದಾತ್ಮಕ ಹೇಳಿಕೆ ನೀಡಿದ್ದು, ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಜಮ್ಹೋರ್ ಗ್ರಾಮದಲ್ಲಿ ಶುಚಿತ್ವ ಕುರಿತಂತೆ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಶೌಚಾಲಯಗಳು ಇಲ್ಲದ ಕಾರಣ ಮಹಿಳೆಯರಮೇಲೆ ಇಂದು ಅತ್ಯಾಚಾರಗಳು ನಡೆಯುತ್ತಿವೆ. ಒಂದು ಶೌಚಾಲಯ ನಿರ್ಮಾಣಕ್ಕೆ ಕೇವಲ 12 ಸಾವಿರ ರೂ ಖರ್ಚಾಗುತ್ತದೆ. ಪತ್ನಿಯ ಘನತೆಗಾಗಿ 12 ಸಾವಿರ ರೂ ದೊಡ್ಡದಾಗುತ್ತಾ ಎಂದು ಪ್ರೆಶ್ನಿಸಿದ್ದಾರೆ. ಈ ವೇಳೆ ಗ್ರಾಮಸ್ಥರೊಬ್ಬರು  ನನ್ನ ಬಳಿ ಅಷ್ಟು ಹಣವಿಲ್ಲ ಹೀಗಾಗಿ ಶೌಚಾಲಯ ಹೇಗೆ ಕಟ್ಟಿಸಲಿ ಎಂದು ಕೇಳಿದ್ದಾರೆ.
 
ಇದರಿಂದ ರೊಚ್ಚಿಗೆದ್ದ ಮ್ಯಾಜಿಸ್ಟ್ರೇಟ್, ಜನರು ಅನಗತ್ಯ ವಿಷಯಗಳಿಗಾದರೆ ಹಣ ಖರ್ಚುಮಾಡುತ್ತಾರೆ. ಅದರೆ ಶೌಚಾಲಯದಂತಹ ಸ್ವಚ್ಛತೆ ಬಗ್ಗೆ ಆದ್ಯತೆ ನೀಡುವುದಿಲ್ಲ. ಒಂದು ವೇಳೆ ಶೌಚಾಲಯ ಕಟ್ಟಿಸಲು ಸಾಧ್ಯವಾಗದೇ ಇದ್ದರೆ ನಿಮ್ಮ ಹೆಂಡತಿಯನ್ನು ಹರಾಜಿನಲ್ಲಿ ಮಾರಿ ಬಿಡಿ ಎಂದು ಗುಡುಗಿದ್ದಾರೆ.
 

ವೆಬ್ದುನಿಯಾವನ್ನು ಓದಿ