ಕಾಂಗ್ರೆಸ್ ಯಾತ್ರೆಯಲ್ಲಿ ಹಿರಿಯ ಮುಖಂಡರೇ ಮಾಯ!

ಗುರುವಾರ, 7 ಮಾರ್ಚ್ 2019 (15:53 IST)
ಒಂದು ಪಕ್ಷದ ಸಭೆ ಎಂದರೆ ಅದರಲ್ಲಿ ಹಿರಿಯ ನಾಯಕರ ಶ್ರಮವನ್ನು ಮೊದಲಿಗೆ ಸ್ಮರಿಸಲಾಗುತ್ತದೆ. ಆದರೆ ಅಲ್ಲಿ ನಡೆದ ಕಾಂಗ್ರೆಸ್ ಪರಿವರ್ತನಾ ಸಭೆಯಲ್ಲಿ ಜಿಲ್ಲೆಯ ಹಿರಿಯ ನಾಯಕರೇ ಮಾಯವಾಗಿದ್ದು ಚರ್ಚೆಗೆ ಕಾರಣವಾಗಿದೆ.

ಮಂಗಳೂರುನಲ್ಲಿ  ಕಾಂಗ್ರೆಸ್ ಪರಿವರ್ತನಾ ಯಾತ್ರೆ ಹಮ್ಮಿಕೊಂಡಿತ್ತು. ವೇದಿಕೆಯಲ್ಲಿ  ಹಾಕಲಾಗಿದ್ದ ಬೃಹತ್ ಕಟೌಟ್ ನಲ್ಲಿ  ಜಿಲ್ಲೆಯ ನಾಯಕರು ಫೋಟೋಗಳು ಮಾಯವಾಗಿದ್ದವು. ದಕ್ಷಿಣ ಕನ್ನಡ ಜಿಲ್ಲೆಯಿಂದ ರಾಷ್ಟ್ರ ರಾಜಕಾರಣದಲ್ಲಿ ಮಿಂಚಿದ್ದ  ಮಾಜಿ ಕೇಂದ್ರ ಸಚಿವ ಹಾಗೂ ಪ್ರದೇಶ ಕಾಂಗ್ರೆಸ್ ಸಮಿತಿ ಮಾಜಿ ಅಧ್ಯಕ್ಷ ಜನಾರ್ಧನ ಪೂಜಾರಿ, ಮಾಜಿ ಮುಖ್ಯಮಂತ್ರಿ ಹಾಗೂ ಮಾಜಿ ಕೇಂದ್ರ ಸಚಿವ ವೀರಪ್ಪ ಮೊಯಿಲಿ ಹಾಗೂ ಮಾಜಿ ಕೇಂದ್ರ ಸಚಿವ ಆಸ್ಕರ್ ಫೆರ್ನಾಂಡೀಸ್  ಅವರ ಭಾವ ಚಿತ್ರ ಕಣ್ಮರೆ ಆಗಿದ್ದವು. ಇದು ಸ್ವಲ್ಪ ಮಟ್ಟಿಗೆ ಕಾರ್ಯಕರ್ತರಿಗೆ ನಿರಾಶೆಯನ್ನು  ಉಂಟು ಮಾಡಿತ್ತು.

ಕೈ ಪಾಳೆಯದ ಪರಿವರ್ತನಾ ಯಾತ್ರೆಯಲ್ಲಿ ವೇದಿಕೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ಪಕ್ಷದ ಘಟಾನುಘಟಿ  ನಾಯಕರಿದ್ದರೂ ಈ ಮೂರು ಮಂದಿ ನಾಯಕರ ಹೆಸರು ಕೂಡಾ ಪ್ರಸ್ತಾಪ ಮಾಡಲಿಲ್ಲ.  ಈ ಪೈಕಿ ಮಾಜಿ ಕೇಂದ್ರ ಸಚಿವ ಜನಾರ್ಧನ್ ಪೂಜಾರಿ ಅವರು ಸಿದ್ದರಾಮಯ್ಯ ಕುರಿತು ಪತ್ರಿಕಾಗೋಷ್ಠಿ ಯಲ್ಲಿ ಬಹಿರಂಗ ಟೀಕೆ ಮಾಡಿದ್ದರು. ಕಾಂಗ್ರೆಸ್ ಪಕ್ಷಕ್ಕೆ ಸಿದ್ದರಾಮಯ್ಯ ಶನಿ ಇದ್ದಂತೆ  ಎಂದು  ಹಿಂದೆ ವ್ಯಂಗ್ಯವಾಡಿದ್ದರು.ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ