ಗಂಭೀರವಾಗಿದೆ ಆರ್ಥಿಕ ಸ್ಥಿತಿ !

ಶುಕ್ರವಾರ, 25 ಮಾರ್ಚ್ 2022 (08:54 IST)
ಕೊಲೊಂಬೊ : ಆರ್ಥಿಕತೆ ಕುಸಿತವು ಜನಸಾಮಾನ್ಯರು ನಿತ್ಯ ಜೀವನದ ಮೇಲೆ ಗಂಭೀರ ಪರಿಣಾಮ ಬೀರಿದ್ದು, ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ.

ದಿನಬಳಕೆ ವಸ್ತುಗಳಾದ ಅಕ್ಕಿ, ಹಾಲಿನಪುಡಿ ಸೇರಿದಂತೆ ಅನೇಕ ವಸ್ತುಗಳ ಬೆಲೆ ಧಿಡೀರ್ ಏರಿಕೆಯಾಗಿದೆ. 400 ಗ್ರಾಂ ಹಾಲಿನಪುಡಿಯ ಬೆಲೆ 790 ರೂಪಿಗೆ ತಲುಪಿದ್ದರೆ,

1 ಕೇಜಿ ಅಕ್ಕಿಯ ಬೆಲೆ 290 ಲಂಕಾ ರೂ, ಟೀ 1ಕಪ್ಗೆ 100 ರೂ, ಗೋಧಿ ಹಿಟ್ಟು 160 ರೂ, ಕಾಳುಗಳು 270 ರೂ, ಪೆಟ್ರೋಲ್ 283 ರೂ, ಡಿಸೇಲ್ 254 ರೂ, ಎಲ್ಪಿಜಿ 2000 ರೂ ನಷ್ಟಾಗಿದೆ.

ಭಾರತ, ಚೀನಾ ಸೇರಿದಂತೆ ಕೆಲ ದೇಶಗಳು ಶ್ರೀಲಂಕಾಕ್ಕೆ ಈ ಸಮಸ್ಯೆಯಿಂದ ಹೊರಬರಲು ನೆರವು ಮತ್ತು ಸಾಲದ ಸೌಲಭ್ಯ ಒದಗಿಸಿದೆ. ಆದರೆ ಮುಂದಿನ ದಿನಗಳಲ್ಲಿ ಪರಿಸ್ಥಿತಿ ಇನ್ನಷ್ಟು ಗಂಭೀರವಾಗುವ ಆತಂಕವಿದೆ. ಪೇಪರ್ ದೊರೆಯದೆ ಶಾಲೆಗಳು ಪರೀಕ್ಷೆ ನಡೆಸಲಾಗುತ್ತಿಲ್ಲ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ