ನವದೆಹಲಿಯಲ್ಲಿ ಹೈ-ಪ್ರೊಫೈಲ್ ಸೆಕ್ಸ್ ರಾಕೆಟ್: ಬಂಧನ

ಗುರುವಾರ, 21 ಜುಲೈ 2016 (16:03 IST)
ನಗರದ ಸಫ್ದರ್‌ಜಂಗ್ ಪ್ರದೇಶದಲ್ಲಿ ನಡೆಯುತ್ತಿದ್ದ ಹೈ-ಪ್ರೊಫೈಲ್ ಸೆಕ್ಸ್ ರಾಕೆಟ್‌ನಲ್ಲಿ ತೊಡಗಿದ್ದ 63 ವರ್ಷ ವಯಸ್ಸಿನ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. 
 
ಪೊಲೀಸ್ ಮೂಲಗಳ ಪ್ರಕಾರ, ಆರೋಪಿ ಪಿ.ಎನ್.ಸನಿಯಾಲ್ ವಿದೇಶಿ ಮಹಿಳೆಯರೊಂದಿಗೆ ಸಂಪರ್ಕವಿಟ್ಟುಕೊಂಡಿದ್ದು ಅವರನ್ನು ವೇಶ್ಯಾವಾಟಿಕೆಯಲ್ಲಿ ತೊಡಗಿಸಿದ್ದ ಎಂದು ಮೂಲಗಳು ತಿಳಿಸಿವೆ.
 
ಕಳೆದ ಜುಲೈ 2 ರಂದು ಆದಾಯ ತೆರಿಗೆ ಅಧಿಕಾರಿಗಳು ಸನಿಯಾಲ್ ನಿವಾಸದ ಮೇಲೆ ರೈಡ್ ಮಾಡಿದಾಗ ರಷ್ಯಾ ದೇಶದ ಯುವತಿ ಪತ್ತೆಯಾಗಿದ್ದಳು. ಇದರಿಂದ ಅನುಮಾನಗೊಂಡ ಅಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದರು.
 
ಇಂಪೋರ್ಟ್-ಎಕ್ಸ್‌ಪೋರ್ಟ್ ವಹಿವಾಟು ನಡೆಸುತ್ತಿದ್ದ ಆರೋಪಿ ಸನಿಯಾಲ್ ಅನೇಕ ಫೋರ್ಜರಿ ಪ್ರಕರಣಗಳಲ್ಲಿ ಕೂಡಾ ಭಾಗಿಯಾಗಿದ್ದಾನೆ. ಸಂಸದರ ನಕಲಿ ದಾಖಲೆಗಳನ್ನು ಸೃಷ್ಟಿಸುವುದು, ನಕಲಿ ಸಹಿ ಮಾಡುವುದು ಸೇರಿದಂತೆ ಹಲವು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. 
 
ಪೊಲೀಸರು ಆರೋಪಿ ಸನಿಯಾಲ್ ಮನೆಯ ಮೇಲೆ ದಾಳಿ ಮಾಡಿದಾಗ ಅನೇಕ ಸಂಸದರ ಲೆಟರ್‌ಹೆಡ್‌ಗಳು ಪತ್ತೆಯಾಗಿವೆ. ಇದೀಗ ಪ್ರಕರಣವನ್ನು ಅಪರಾಧ ಪತ್ತೆ ದಳಕ್ಕೆ ವಹಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ