ಸಹೋದರಿಯರಿಗೆ ಅವಮಾನ, ದೇಶವೇ ಮಣಿಪುರದೊಂದಿಗೆ ನಿಂತಿದೆ : ನರೇಂದ್ರ ಮೋದಿ

ಮಂಗಳವಾರ, 15 ಆಗಸ್ಟ್ 2023 (11:05 IST)
ನವದೆಹಲಿ : ಕಳೆದ ಕೆಲವು ವಾರಗಳಿಂದ ಮಣಿಪುರ ಹಿಂಸಾಚಾರಕ್ಕೆ ಸಾಕ್ಷಿಯಾಗಿದೆ. ಇದರಲ್ಲಿ ನಮ್ಮ ತಾಯಿ ಮತ್ತು ಸಹೋದರಿಯರಿಗೆ ಅವಮಾನವಾಯಿತು. ಈಗ ನಿಧಾನವಾಗಿ ಈ ಪ್ರದೇಶದಲ್ಲಿ ಶಾಂತಿ ಮರಳುತ್ತಿದೆ. ಭಾರತವು ಮಣಿಪುರದೊಂದಿಗೆ ನಿಂತಿದೆ

77ನೇ ಸ್ವಾತಂತ್ರ್ಯೋತ್ಸವದ ಭಾಷಣ ಮಾಡಿದ ಅವರು, ಶಾಂತಿ ಕಾಪಾಡಲು ಕೇಂದ್ರ ಮತ್ತು ರಾಜ್ಯ ಸರ್ಕಾರ ಒಟ್ಟಾಗಿ ಶ್ರಮಿಸುತ್ತಿವೆ. ಅಲ್ಲದೇ ಶಾಂತಿಯನ್ನು ಮರು ಸ್ಥಾಪಿಸಲು ಹೊಸ ಮಾರ್ಗಗಳನ್ನು ಕಂಡುಕೊಳ್ಳಲಾಗುತ್ತಿದೆ. ಏಕತೆಯ ಬಗ್ಗೆ ಮಾತನಾಡುವಾಗ ಮಣಿಪುರದಲ್ಲಿ ಹಿಂಸಾಚಾರ ನಡೆದರೆ ಅದರ ನೋವು ಮಹಾರಾಷ್ಟ್ರದಲ್ಲೂ ಇರುತ್ತದೆ ಎಂದಿದ್ದಾರೆ. 

ಇದು ಅವರು ಪ್ರಧಾನಿಯಾಗಿ 10 ನೇ ಸ್ವಾತಂತ್ರ್ಯ ದಿನದ ಭಾಷಣವಾಗಿದೆ. ಇದೇ ವೇಳೆ ಮಹಾತ್ಮಾ ಗಾಂಧಿ, ಭಗತ್ ಸಿಂಗ್, ರಾಜಗುರು, ಸುಖದೇವ್ ಮತ್ತು ಇತರ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ