ನವದೆಹಲಿ : ನಾವು ತೆಗೆದುಕೊಳ್ಳುವ ನಿರ್ಧಾರ ಮುಂದಿನ ಒಂದು ಸಾವಿರ ವರ್ಷ ಭಾರತ ದಿಕ್ಕನ್ನು ತೋರಿಸಲಿದೆ. ಈ ಅವಧಿಯಲ್ಲಿ ತೆಗೆದುಕೊಳ್ಳುವ ನಿರ್ಧಾರ ಮುಂದಿನ ಒಂದು ಸಾವಿರ ವರ್ಷದಲ್ಲಿ ಸುವರ್ಣ ಅಕ್ಷರಗಳಲ್ಲಿ ಬರೆದಿಡುವ ಸಮಯವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
77ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಕೆಂಪು ಕೋಟೆಯಲ್ಲಿ ಇಂದು (ಮಂಗಳವಾರ) ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಗುಲಾಮಿ ಮನಸ್ಥಿತಿಯಿಂದ ಹೊರ ಬರುವ ನಿರ್ಧಾರ ತೆಗೆದುಕೊಳ್ಳುವ ಸಮಯವಾಗಿದೆ. ಭಾರತ ಹೊಸ ಸಾಮರ್ಥ್ಯದೊಂದಿಗೆ ಎಲ್ಲರನ್ನು ಸೆಳೆಯಲಿದೆ. ಈ ಹಿಂದಿನ ಗುಲಾಮಿ ವ್ಯವಸ್ಥೆ ಮತ್ತು ಮುಂದಿನ ಒಂದು ಸಾವಿರ ವರ್ಷದ ಭವ್ಯ ಭಾರತದ ನಡುವೆ ನಾವಿದ್ದೇವೆ ಎಂದು ತಿಳಿಸಿದರು.
ಸ್ವಾತಂತ್ರ್ಯ ಹೋರಾಟಗಾರದಲ್ಲಿ ಹೋರಾಟ ಮಾಡಿದ, ಬಲಿದಾನ ನೀಡಿದ ಎಲ್ಲ ಹೋರಾಟಗಾರಿಗೆ ಗೌರವ ಸಲ್ಲಿಸುತ್ತೇನೆ. ಇದು ಅಮೃತ ಕಾಲದ ಮೊದಲ ವರ್ಷ. ಈ ಅವಧಿಯಲ್ಲಿ ನಾವು ತೆಗೆದುಕೊಳ್ಳುವ ನಿರ್ಧಾರ ದೇಶದ ಎಲ್ಲ ಜನರ ಹಿತಾಸಕ್ತಿ ಕಾಪಾಡಲಿದೆ. ಇಂದು ನಮ್ಮ ಯುವಕರಿಗೆ ಹೊಸ ಅವಕಾಶ ಸಿಕ್ಕಿದೆ. ನಮ್ಮ ಸರ್ಕಾರದ ನೀತಿಯೂ ಯುವ ಶಕ್ತಿಗೆ ಬಲ ನೀಡಲಿದೆ. ಸ್ಟಾರ್ಟ್ ಅಪ್ಗೆ ಅವಕಾಶ ನೀಡಿದೆ.
ಭಾರತ ಈಗ ವಿಶ್ವದ ಮೂರನೇ ಅತಿದೊಡ್ಡ ಸ್ಟಾರ್ಟ್ ಅಪ್ ದೇಶವಾಗಿದೆ. ಖಿ2, ಖಿ3 ನಗರಗಳಿಂದಲೂ ಪ್ರತಿಭೆಗಳು ಹೊರ ಬರುತ್ತಿವೆ. ಸಣ್ಣ ಊರುಗಳು ಚಿಕ್ಕದಾಗಿರಬಹುದು, ಅವುಗಳ ಶಕ್ತಿ ದೊಡ್ಡದಿದೆ. ಬಡ ಕುಟುಂಬಗಳಿಂದ ಬರುವ ಯುವಕರು ಸಾಧನೆ ಮಾಡುತ್ತಿದ್ದಾರೆ. 100 ಕ್ಕೂ ಅಧಿಕ ಶಾಲಾ ಮಕ್ಕಳು ಸೆಟಲೈಟ್ ಉಡಾವಣೆ ಮಾಡುತ್ತಿವೆ. ಅವಕಾಶಗಳಿಗೆ ಕಡಿಮೆ ಏನು ಇಲ್ಲ. ಎಲ್ಲ ಅವಕಾಶಗಳನ್ನು ಸರ್ಕಾರ ನೀಡಲಿದೆ.