ತೆಲಂಗಾಣಕ್ಕೆ 2 ವರ್ಷದ ಸಂಭ್ರಮ: 100 ಕೋಟಿ ವೆಚ್ಚ ಮಾಡುತ್ತಿರುವ ಸಿಎಂ ಕೆಸಿಆರ್‌ಗೆ ದಿಗ್ವಿಜಯ್ ಸಿಂಗ್ ಛೀಮಾರಿ
ಗುರುವಾರ, 2 ಜೂನ್ 2016 (12:19 IST)
ರಾಜ್ಯದಲ್ಲಿ ಬರಗಾಲದಿಂದಾಗಿ ಜನತೆ ತತ್ತರಿಸಿದ್ದರೂ ತೆಲಂಗಾಣ ರಾಜ್ಯ ರಚನೆಯಾದ ಎರಡನೇ ವಾರ್ಷಿಕೋತ್ಸವದ ಅಂಗವಾಗಿ ನೂರಾರು ಕೋಟಿ ರೂಪಾಯಿಗಳನ್ನು ವೆಚ್ಚ ಮಾಡುತ್ತಿರುವುದಕ್ಕೆ ನಾಚಿಕೆಯಾಗಬೇಕು ಎಂದು ತೆಲಂಗಾಣ ಸಿಎಂ ಕೆ.ಚಂದ್ರಶೇಖರ್ ರಾವ್ ವಿರುದ್ಧ ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ವಾಗ್ದಾಳಿ ನಡೆಸಿದ್ದಾರೆ.
ಕಳೆದ ಎರಡು ವರ್ಷಗಳಿಂದ ಸಿಎಂ ಕೆ.ಚಂದ್ರಶೇಖರ್ ರಾವ್ ಅವರ ಒಂದೇ ಕುಟುಂಬ ಸಂಪೂರ್ಣ ರಾಜ್ಯ ಸ್ಥಾನಮಾನದ ಲಾಭ ಪಡೆದಿದೆ. ತೆಲಂಗಾಣಾದ ಜನತೆಗೆ. ದೀರ್ಘಾವಧಿಯಿಂದ ನೆನೆಗುದಿಗೆ ಬಿದ್ದಿದ್ದ ತೆಲಂಗಾಣ ರಾಜ್ಯದ ಬೇಡಿಕೆಯನ್ನು ಈಡೇರಿಸಿರುವುದಕ್ಕೆ ಅಭಿನಂಧನೆಗಳು ಎಂದು ಟ್ವೀಟ್ ಮಾಡಿದ್ದಾರೆ
ಬಿಸಿಲಿನ ಬೇಗೆ, ಬರಗಾಲ, ನಿರುದ್ಯೋಗ ಸಮಸ್ಯೆಗಳಿಂದಾಗಿ ಸಾವಿರಾರು ರೈತರು, ಉದ್ಯೋಗಿಗಳು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಆದರೆ, ಸಿಎಂ ಕೆ.ಸಿ. ಚಂದ್ರಶೇಖರ್ ರಾವ್ 100 ಕೋಟಿ ರೂಪಾಯಿಗಳ ಜಾಹೀರಾತು ನೀಡಿರುವುದು ನಾಚಿಕೆಗೇಡಿತನದ ಸಂಗತಿ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಕೂಡಾ ತೆಲಂಗಾಣ ಜನತೆಗೆ ಸಂಪೂರ್ಣ ರಾಜ್ಯದ ಸ್ಥಾನ ಪಡೆದು ಎರಡನೇ ವರ್ಷಕ್ಕೆ ಕಾಲಿಡುತ್ತಿರುವ ಸಂದರ್ಭದಲ್ಲಿ, ತೆಲಂಗಾಣ ಅಭಿವೃದ್ಧಿಯತ್ತ ಸಾಗಲಿ ಎಂದು ಹಾರೈಸಿದ್ದಾರೆ.
ತೆಲಂಗಾಣಕ್ಕೆ ಸಂಪೂರ್ಣ ರಾಜ್ಯದ ಸ್ಥಾನಮಾನ 2014ರ ಜೂನ್ 2 ರಂದು ದೊರೆತಿದೆ. ಇದೀಗ ಎರಡು ವರ್ಷಗಳಾಗಿದ್ದರಿಂದ ತೆಲಂಗಾಣ ಜನತೆ ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ