ಆಷಾಢ ಶುಕ್ರವಾರ ಮನೆಗೆ ಹೊಸ ಅತಿಥಿ ಬರಮಾಡಿಕೊಂಡ ತೇಜಸ್ವಿ ಸೂರ್ಯ ದಂಪತಿ: ವಿಡಿಯೋ

Krishnaveni K

ಶನಿವಾರ, 5 ಜುಲೈ 2025 (13:00 IST)
ಬೆಂಗಳೂರು: ಆಷಾಢ ಶುಕ್ರವಾರದಂದು ಸಂಸದ ತೇಜಸ್ವಿ ಸೂರ್ಯ ದಂಪತಿ ಮನೆಗೆ ಹೊಸ ಅತಿಥಿಯೊಂದನ್ನು ಬರಮಾಡಿಕೊಂಡಿದ್ದಾರೆ. ಈ ವಿಡಿಯೋ ಇಲ್ಲಿದೆ ನೋಡಿ.

ತೇಜಸ್ವಿ ಸೂರ್ಯ ಮತ್ತು ಪತ್ನಿ, ಗಾಯಕಿ ಶಿವಶ್ರೀ ಸ್ಕಂದ ಪ್ರಸಾದ್ ಇತ್ತೀಚೆಗಷ್ಟೇ ಮದುವೆಯಾದವರು. ಇದು ನವ ದಂಪತಿಗಳಿಗೆ ಮೊದಲ ಆಷಾಢ ಶುಕ್ರವಾರ. ಇಬ್ಬರೂ ಧಾರ್ಮಿಕ ನಂಬಿಕೆ, ಶ್ರದ್ಧೆಯುಳ್ಳವರು. ಹೀಗಾಗಿ ಆಷಾಢ ಶುಕ್ರವಾರಕ್ಕೆ ವಿಶೇಷ ಅತಿಥಿಯನ್ನೇ ಮನೆಗೆ ಬರಮಾಡಿಕೊಂಡಿದ್ದಾರೆ.

ತೇಜಸ್ವಿ ತಮ್ಮ ಮನೆಗೆ ಪುಟಾಣಿ ಕರುವೊಂದನ್ನು ಕರೆತಂದಿದ್ದು ಇದರ ಮುಂದೆ ಕೂತು ತೇಜಸ್ವಿ ಪತ್ನಿ ಶಿವಶ್ರೀ ಕೃಷ್ಣನ ಕುರಿತಾದ ದೇವರ ನಾಮವೊಂದನ್ನು ಹಾಡಿ ಕರುವನ್ನು ಮುದ್ದು ಮಾಡಿದ್ದಾರೆ. ಆಷಾಢ ಶುಕ್ರವಾರದಂದು ತಮ್ಮ ಮನೆಗೆ ಮಹಾಲಕ್ಷ್ಮಿಯನ್ನು ಬರಮಾಡಿಕೊಂಡಿದ್ದೇವೆ. ಈಕೆ ದೈವ ಸ್ವರೂಪಿ. ಅವಳಿಗೆ ಲಕ್ಷ್ಮಿ, ಗೌರಿ ಹೀಗೆ ಹಲವು ಹೆಸರುಗಳಿಂದ ಕರೆಯುತ್ತೇವೆ ಎಂದು ತೇಜಸ್ವಿ ಹೇಳಿಕೊಂಡಿದ್ದಾರೆ. ಪುಂಗನೂರು ತಳಿಯ ಈ ಕರುವನ್ನು ಆಂಧ್ರಪ್ರದೇಶದ ಬಿಜೆಪಿ ನಾಯಕ ವಂಶಿ ಕೃಷ್ಣ ನಾಲ್ಕು ದಿನಗಳ ಹಿಂದೆ ತೇಜಸ್ವಿ ಸೂರ್ಯಗೆ ಉಡುಗೊರೆಯಾಗಿ ನೀಡಿದ್ದರು.

ಈ ಮುದ್ದಾದ ವಿಡಿಯೋಗೆ ಸಾಕಷ್ಟು ಜನ ಕಾಮೆಂಟ್ ಮಾಡಿದ್ದು ಸರಿಯಾದ ಆಯ್ಕೆಯನ್ನೇ ಮಾಡಿದ್ದೀರಿ. ಕರು ಅಂತೂ ಮುದ್ದಾಗಿದೆ ಎಂದಿದ್ದಾರೆ. ಜೊತೆಗೆ ಕರುವಿನ ರೂಪದಲ್ಲಿ ನಿಮ್ಮ ಮನೆಗೆ ಮಹಾಲಕ್ಷ್ಮಿ ಬಂದು ನೆಲೆಸಲಿ ಎಂದು ಹಾರೈಸಿದ್ದಾರೆ.

 
 
 
 
View this post on Instagram
 
 
 
 
 
 
 
 
 
 
 

A post shared by Tejasvi Surya (@tejasvisurya)

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ