ಸೋನಿಯಾ ಗಾಂಧಿ, ದೇವೇಗೌಡ, ನಾನು ಜತೆಯಾಗಿದ್ದರೆ ವಿಪಕ್ಷಗಳು ಒಂದು ಮಾಡಬಹುದು ಎಂದವರು ಯಾರು?
ಪ್ರಧಾನಿ ಪಟ್ಟದ ಮೇಲೆ ಯಾವುದೇ ಆಕಾಂಕ್ಷೆ ಇಲ್ಲದ ನಾವು ಮೂವರು ಪ್ರಯತ್ನ ಪಟ್ಟರೆ ವಿಪಕ್ಷಗಳು ಒಂದಾಗುತ್ತವೆ ಮತ್ತು ಬಿಜೆಪಿಯನ್ನು ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಸೋಲಿಸುತ್ತದೆ ಎಂದ ಶರದ್ ಪವಾರ್ ಹೇಳಿಕೊಂಡಿದ್ದಾರೆ.
ಖಾಸಗಿ ವಾಹಿನಿಯೊಂದಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಶರದ್ ಪವಾರ್ ರಾಷ್ಟ್ರಮಟ್ಟದಲ್ಲಿ ಮಾತ್ರವಲ್ಲ, ವಿಪಕ್ಷಗಳು ರಾಜ್ಯಮಟ್ಟದಲ್ಲೇ ಮೈತ್ರಿ ಮಾಡಿಕೊಳ್ಳಬೇಕು. ಪ್ರಧಾನಿ ಮೋದಿ ಕೂಡಾ ಮಾಧ್ಯಮ, ಸರ್ಕಾರಿ ಸಂಸ್ಥೆಗಳ ಮೇಲೆ ತಮ್ಮ ಪ್ರಭುತ್ವ ಸಾಧಿಸಿ ಇಂದಿರಾ ಗಾಂಧಿಯವರಂತೆ ನಡೆದುಕೊಳ್ಳುತ್ತಿದ್ದಾರೆ. ಇದರಿಂದಾಗಿ ಮೋದಿ ವಿರೋಧಿ ಅಲೆ ಸೃಷ್ಟಿಯಾಗಿದೆ ಎಂದು ಪವಾರ್ ಹೇಳಿಕೊಂಡಿದ್ದಾರೆ.