ಶೀನಾ ಬೋರಾ ಕೇಸ್ ವಿಚಾರಣೆ ನಡೆಸುತ್ತಿದ್ದ ಪೊಲೀಸ್ ಅಧಿಕಾರಿಯ ಪತ್ನಿ ಹತ್ಯೆ

ಬುಧವಾರ, 24 ಮೇ 2017 (17:03 IST)
ಹೈಪ್ರೊಫೈಲ್ ಶೀನಾ ಬೋರಾ ಹತ್ಯೆ ಪ್ರಕರಣದ ವಿಚಾರಣೆ ನಡೆಸುತ್ತಿರುವ ಮುಂಬೈ ಪೊಲೀಸ್ ಅಧಿಕಾರಿ ಪತ್ನಿ ನಿವಾಸದಲ್ಲೇ ಬರ್ಬರವಾಗಿ ಹತ್ಯೆಯಾಗಿದ್ದಾಳೆ. 21 ವರ್ಷದ ಮಗನೇ ಈ ಹತ್ಯೆ ಮಾಡಿರುವ ಶಂಕೆ ಇದ್ದು, ನಾಪತ್ತೆಯಾಗಿರುವ ಮಗನಿಗಾಗಿ ಶೋಧ ನಡೆದಿದೆ.

ಪೊಲೀಸ್ ಅಧಿಕಾರಿ ಧ್ಯೇಶ್ವರ್ ಗ್ಯಾನೋರ್ ಡ್ಯೂಟಿ ಮುಗಿಸಿಕೊಂಡು ಮಧ್ಯರಾತ್ರಿ 1ಗಂಟೆ ಸುಮಾರಿಗೆ ಮನೆಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ. ಎಷ್ಟು ಬಡಿದರೂ ಬಾಗಿಲು ತೆಗೆಯಲಿಲ್ಲ. ಅಮ್ಮ ಮತ್ತು ಮಗ ಹೊರಗಡೆ ಹೋಗಿರಬಹುದೆಂದು 2 ಗಂಟೆ ಕಾದಿದ್ದಾರೆ. ಅನುಮಾನ ಬಂದು ಅತ್ತಿತ್ತ ಸುಳಿದಾಡುವಾಗ ಕಸದ ಬುಟ್ಟಿಯಲ್ಲಿ ಮನೆಯ ಕೀ ಸಿಕ್ಕಿದೆ. ಬಾಗಿಲು ತೆರೆದಾಗ ಪೊಲೀಸ್`ಗೆ ಅಕ್ಷರಶಃ ಶಾಕ್ ಕಾದಿತ್ತು. ಬೆಡ್ ರೂಮಿನಲ್ಲಿ ಹತ್ಯೇಗೀಡಾಗಿದ್ದ ಪತ್ನಿ ರಕ್ತದ ಮಡುವಿನಲ್ಲಿ ಬಿದ್ದಿದ್ದಳು. ಮೃತದೇಹದ ಪಕ್ಕದಲ್ಲಿ ಅವಳಿಂದ ನನಗೆ ಸಾಕಾಗಿ ಹೋಗಿತ್ತು. ನನ್ನನ್ನ ಹಿಡಿಯಿರಿ ಮತ್ತು ನೇಣಿಗೆ ಹಾಕಿ ಎಂಬ ಬರಹವಿದ್ದು, ತಲೆಮರೆಸಿಕೊಂಡಿರುವ ಮಗ ಸಿದ್ಧಾಂತ್ ಕೈವಾಡವೇ ಇರುವ ಶಂಕೆ ವ್ಯಕ್ತವಾಗಿದೆ.

ಮಗನ ಶೈಕ್ಷಣಿಕ ವಿಷಯವಾಗಿ ಹಲವು ಬಾರಿ ತಾಯಿ ಸಿದ್ಧಾಂತ್`ಗೆ ಎಚ್ಚರಿಕೆ ನೀಡಿದ್ದರು. ಇಂಜಿನಿಯರಿಂಗ್ ಅರ್ಧಕ್ಕೆ ನಿಲ್ಲಿಸಿ ನ್ಯಾಶನಲ್ ಕಾಲೇಜು ಸೇರಿದ್ದ ಮಗನಿಗೆ ಪಾಕೆಟ್ ಮನಿ ಕೊಡದೇ, ಸೋಶಿಯಲ್ ಮೀಡಿಯಾಗಳನ್ನೂ ಬಳಸದಂತೆ ನಿರ್ಬಂಧಿಸಲಾಗಿತ್ತು ಎನ್ನುತ್ತಾರೆ ಪೊಲೀಸರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ