ಸುಖ್ಬೀರ್ ಬಾದಲ್ ತಮ್ಮ ಪತ್ನಿಗೆ ಕೇಂದ್ರದಲ್ಲಿ ಸಚಿವ ಸ್ಥಾನ ಕೊಡಿಸುವ ನಿಟ್ಟಿನಲ್ಲಿ ನನ್ನನ್ನು ಮತ್ತು ಸಾದ್ ಪಕ್ಷದ ಸಂಸದ ರತ್ತನ್ ಸಿಂಗ್ ಅಜ್ನಾಲಾ ಅವರನ್ನು ಕಡೆಗೆಣಿಸಲಾಯಿತು. ಶಾಹೀದ್ ಭಗತ್ ಸಿಂಗ್ ಕಾರ್ಯಕ್ರಮದಲ್ಲಿ ನನಗೆ ಮಾತನಾಡಲು ಕೂಡಾ ಅವಕಾಶ ಕೊಡಲಿಲ್ಲ. ಅಮೃತ್‌ಸರ್ ಅಭಿವೃದ್ಧಿ ಕುರಿತಂತೆ ನಡೆದ ಸಭೆಗಳಿಗೂ ಕೂಡಾ ನನಗೆ ಆಹ್ವಾನ ನೀಡಲಿಲ್ಲ ಎಂದು ಆರೋಪಿಸಿದರು.
ತಾವು ಸಂಸದರಾಗಿದ್ದಾಗ ಜಾರಿಗೆ ತರಲು ಉದ್ದೇಶಿಸಿದ್ದ ಸ್ಪೋರ್ಟ್ಸ್ ಕಾಂಪ್ಲೆಕ್ಸ್, ಭಂಡಾರಿ ಸೇತುವೆ ಅಗಲೀಕರಣ, ಸಾಲಿಡ್ ವೇಸ್ಟ್ ಮ್ಯಾನೇಜ್‌ಮೆಂಟ್ ಸಿಸ್ಟಮ್, ಸಿಸಿಟಿವಿ ಕ್ಯಾಮರಾ ಅಳವಡಿಕೆ, ಫ್ಲೈಓವರ್ ಮತ್ತು ಅಂಡರ್‌ಪಾಸ್ ಯೋಜನೆಗಳನ್ನು ಉದ್ದೇಶಪೂರ್ವಕವಾಗಿ ನೆನೆಗುದಿಗೆ ಹಾಕಲಾಯಿತು ಎಂದು ಕಿಡಿಕಾರಿದರು.