ಸಿಂಗಾಪುರದ ಮಾಜಿ ಅಧ್ಯಕ್ಷ, ಭಾರತೀಯ ಮೂಲದ ಎಸ್.ಆರ್ ನಥನ್ ಜುಲೈ 31- ಭಾನುವಾರ ಮುಂಜಾನೆಯಿಂದ (92) ಅಸ್ವಸ್ಥರಾಗಿದ್ದಾರೆ.
ಪಾರ್ಶ್ವವಾಯುಗೆ ತುತ್ತಾಗಿರುವ ಅವರ ಸ್ಥಿತಿ ಚಿಂತಾಜನಕವಾಗಿದ್ದು ತುರ್ತು ನಿಗಾ ಘಟಕದಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
2014ರ ಎಪ್ರಿಲ್ ತಿಂಗಳಲ್ಲಿ ಪಾರ್ಶ್ವವಾಯುಗೆ ತುತ್ತಾಗಿದ್ದರು.
ಸಿಂಗಾಪುರದ 6 ನೇ ಅಧ್ಯಕ್ಷರಾಗಿದ್ದ ಅವರು ಸುದೀರ್ಘ ಸೇವೆ ಸಲ್ಲಿಸಿದ್ದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 1999ರಿಂದ 2011ರ ಅವಧಿಯಲ್ಲಿ ಎರಡು ಬಾರಿಗೆ ಅಧ್ಯಕ್ಷರಾಗಿದ್ದ ಅವರು ನಾನು ಮೂರನೆಯ ಬಾರಿಗೆ ಅಧ್ಯಕ್ಷ ಸ್ಥಾನಕ್ಕೇರುವುದಿಲ್ಲ ಎಂದು ಘೋಷಿಸಿ ಆಗಸ್ಟ್ 31- 2011ರಲ್ಲಿ ಸ್ವ ಇಚ್ಛೆಯಿಂದ ಅಧಿಕಾರ ತ್ಯಜಿಸಿದ್ದರು. ಅವರ ಬಳಿಕ ಟೋನಿ ತನ್ ಕೆಂಗ್ ಯಮ್ ಅಧ್ಯಕ್ಷ ಸ್ಥಾನಕ್ಕೇರಿದ್ದರು.
ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ, ಶ್ರೀ ನಾಥನ್ ಇನ್ಸ್ಟಿಟ್ಯೂಟ್ ಆಗ್ನೇಯ ಏಷ್ಯಾ ಸ್ಟಡೀಸ್‌ನಲ್ಲಿ ಮತ್ತು ಸಿಂಗಪುರ್ ಮ್ಯಾನೇಜ್‌ಮೆಂಟ್ ಆಪ್ ಸೋಶಿಯಲ್ ಸೈನ್ಸ್ ಡಿಸ್ಟಿಂನ್ಗೈಸ್ಡ್ ಸೀನಿಯರ್ ಫೆಲೋವಾಗಿ ಕಾರ್ಯ ನಿರ್ವಹಿಸಿದ್ದರು.
ಅಧ್ಯಕ್ಷರಾಗುವುದಕ್ಕೂ ಮುಂಚೆ ಅವರು ನಾಗರಿಕ ಸೇವೆ, ಭದ್ರತೆ, ಗುಪ್ತಚರ ಮತ್ತು ವಿದೇಶಾಂಗ ವ್ಯವಹಾರಗಳನ್ನು, ನಾಗರಿಕ ಸೇವೆಯಲ್ಲಿ ಪ್ರಮುಖ ಸ್ಥಾನದಲ್ಲಿದ್ದರು. 1988 ರಲ್ಲಿ ಮನೇಷ್ಯಾದಲ್ಲಿ ಸಿಂಗಪುರ ಹೈ ಕಮಿಷನರ್ ಮಲೇಷ್ಯಾ ಹಾಗೂ ನಂತರ ಸಿಂಗಾಪುರದ ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ ರಾಯಭಾರಿ( 1990 ರಿಂದ 1996) ಕಾರ್ಯನಿರ್ವಹಿಸಿದ್ದರು.
ಸಿಂಗಾಪುರ ಅಂಬಾಸಿಡರ್-ಆ್ಯಟ್-ಲಾರ್ಜ್ ಮತ್ತು ಸಿಂಗಾಪುರ್ ರಾಷ್ಟ್ರೀಯ ವಿಶ್ವವಿದ್ಯಾಲಯದ ಪ್ರೋ ಚಾನ್ಸೆಲರ್ ಆಗಿ ಸಹ ಕಾರ್ಯನಿರ್ವಹಿಸಿದರು.