ಸಿಸೋಡಿಯಾ ಭಾರತ ರತ್ನಕ್ಕೆ ಅರ್ಹರು : ಕೇಜ್ರಿವಾಲ್

ಮಂಗಳವಾರ, 23 ಆಗಸ್ಟ್ 2022 (09:31 IST)
ನವದೆಹಲಿ : ಮನೀಶ್ ಸಿಸೋಡಿಯಾ ಅವರು ದೆಹಲಿಯ ಶಿಕ್ಷಣ ವ್ಯವಸ್ಥೆಯ ಸುಧಾರಣೆಗೆ ಮಾಡಿದ ಎಲ್ಲ ಕೆಲಸಗಳಿಂದ ಅವರು ಭಾರತ ರತ್ನಕ್ಕೆ ಅರ್ಹರಾಗಿದ್ದಾರೆ ಎಂದು ಸಿಎಂ ಅರವಿಂದ್ ಕೇಜ್ರಿವಾಲ್ ಅಭಿಪ್ರಾಯಪಟ್ಟಿದ್ದಾರೆ.

ದೆಹಲಿಯಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಿಸೋಡಿಯಾ ಗುಣಮಟ್ಟದ ಸರ್ಕಾರಿ ಶಾಲೆಗಳನ್ನು ರೂಪಿಸಿ ಪವಾಡ ಮೆರೆದಿದ್ದಾರೆ. ಅಂತಹ ವ್ಯಕ್ತಿಗೆ ಭಾರತ ರತ್ನ ಸಿಗಬೇಕು. ಇಡೀ ದೇಶದ ಶಿಕ್ಷಣ ವ್ಯವಸ್ಥೆಯನ್ನೇ ಅವರ ಕೈಗೆ ಕೊಡಬೇಕು. ಬದಲಿಗೆ ಅವರ ವಿರುದ್ಧ ಸಿಬಿಐ ದಾಳಿ ನಡೆದಿದೆ.

ಇದು ಬಿಜೆಪಿ ಅವರಿಗೇ ನಾಚಿಕೆ ಆಗಬೇಕು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಅಬಕಾರಿ ತನಿಖೆಯಲ್ಲಿ ಮನೀಶ್ ಸಿಸೋಡಿಯಾ ಅರೆಸ್ಟ್ ಆಗಬಹುದು. ಯಾರಿಗೆ ಗೊತ್ತು ನಾನು ಸಹ ಅರೆಸ್ಟ್ ಆಗಬಹುದು. ಇದೆಲ್ಲವೂ ಗುಜರಾತಿನ ಚುನಾವಣೆ ಗೆಲ್ಲಲು ಬಿಜೆಪಿ ಮಾಡುತ್ತಿರುವ ತಂತ್ರಗಳು ಎಂದು ಆರೋಪಿಸಿದ್ದಾರೆ. 

ಬಳಿಕ ಮಾತಮಾಡಿದ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ, ಕೇಜ್ರಿವಾಲ್ ನನ್ನ ಗುರು ಹಾಗೂ ಮಾರ್ಗದರ್ಶಕರು. ನಾನು ಸಿಎಂ ಆಗಲು ರಾಜಕೀಯಕ್ಕೆ ಬಂದಿಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ