ಮಧ್ಯಪ್ರದೇಶದಲ್ಲಿ ಯೋಗ ದಿನದ ನೇತೃತ್ವ ವಹಿಸಿದ ಸ್ಮೃತಿ ಇರಾನಿ

ಮಂಗಳವಾರ, 21 ಜೂನ್ 2016 (12:54 IST)
ಸಂಪೂರ್ಣ ವಿಶ್ವದಾದ್ಯಂತ ಇಂದು ಯೋಗ ದಿನವನ್ನು ಆಚರಿಸಲಾಗುತ್ತಿದ್ದು ಪ್ರಧಾನಿ ಮೋದಿ ಸೇರಿದಂತೆ ಎಲ್ಲ ಕೇಂದ್ರ ಸಚಿವರು ದೇಶವಿದೇಶಗಳಲ್ಲಿ ಈ ವಿಶೇಷ ದಿನದ ಸಾರಥ್ಯವನ್ನು ವಹಿಸುತ್ತಿದ್ದಾರೆ. ಕೇಂದ್ರ ಮಾನವ ಸಂಪನ್ಮೂಲ ಖಾತೆ ಸಚಿವೆ ಸ್ಮೃತಿ ಇರಾನಿ ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವನ್ನು ಮುನ್ನಡೆಸಿದರು.

 
ಲಾಲ್ ಪರೇಡ್ ಮೈದಾನದಲ್ಲಿ ನಡೆದ ಯೋಗ ದಿನದ ಕಾರ್ಯಕ್ರಮದಲ್ಲಿ ಅಪಾರ ಜನಸಮೂಹವನ್ನುದ್ದೇಶಿಸಿ ಮಾತನ್ನಾಡಿದ ಅವರು ,"ಪ್ರಾಚೀನ ಭಾರತ ಮತ್ತು ಆಧುನಿಕ ಯುಗದ ನಡುವೆ ಸೇತುವೆಯಾಗಿ ಈ ದಿನ ಕೆಲಸ ಮಾಡುತ್ತದೆ", ಎಂದರು. 
   
ಈ ಕ್ಷೇತ್ರದಲ್ಲಿ ಪ್ರಧಾನಿ ಮೋದಿಯವರ ಸಾಧನೆಯನ್ನು ಕೊಂಡಾಡಿದ ಅವರು ಈ ವಿಶೇಷ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಿದ ಮಧ್ಯಪ್ರದೇಶ್ ಸರ್ಕಾರಕ್ಕೆ ಅಭಿನಂದನೆಗಳನ್ನು ಸಲ್ಲಿಸಿದರು. 
 
ಕಾಲು ಮುರಿದಿದ್ದರೂ ಸಹ ರಾಜ್ಯ ಗೃಹ ಸಚಿವ ಬಾಬುಲಾಲ್ ಗೌರ್ ಯೋಗ ಕಾರ್ಯಕ್ರಮದಲ್ಲಿ ಪಾಲ್ಗೊಂಡಿ ಗಮನ ಸೆಳೆದರು. ಈ ಸಂದರ್ಭದಲ್ಲಿ ಮಾತನ್ನಾಡಿದ ಅವರು, "ನಾನು ಪ್ರತಿದಿನ ಭಗವದ್ಗೀತೆಯನ್ನು ಓದುತ್ತೇನೆ ಮತ್ತು ಯೋಗಾ ಮಾಡುತ್ತೇನೆ. ಇವೆರಡು ನನ್ನ ದಿನನಿತ್ಯದ ಅಭ್ಯಾಸಗಳು", ಎಂದರು. 

ವೆಬ್‌ದುನಿಯಾ ಮೊಬೈಲ್ ಆಪ್ ಡೌನ್‌ಲೋಡ್ ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.

ವೆಬ್ದುನಿಯಾವನ್ನು ಓದಿ