ನವದೆಹಲಿ : ಟಾಟಾ ಐಪಿಎಲ್ನಲ್ಲಿ ಕಳ್ಳಾಟ ನಡೆದಿದೆ ಎಂಬ ಮಾಹಿತಿ ಗುಪ್ತಚರ ಸಂಸ್ಥೆಗಳಿಂದ ಹರಿದಾಡುತ್ತಿದೆ.
ಅಮಿತಾ ಶಾ ಪುತ್ರ ಜಯ್ ಶಾ ಬಿಸಿಸಿಐನ ಸರ್ವಾಧಿಕಾರಿಯಾಗಿರುವುದರಿಂದ ಈ ಬಗ್ಗೆ ಸರ್ಕಾರ ತನಿಖೆ ನಡೆಸುವುದು ಅನುಮಾನ ಹಾಗಾಗಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸುವ ಅಗತ್ಯ ಬರಬಹುದು ಎಂದು ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಬಾಂಬ್ ಸಿಡಿಸಿದ್ದಾರೆ.
ಈ ಬಗ್ಗೆ ಟ್ವಿಟ್ಟರ್ನಲ್ಲಿ ಟ್ವೀಟ್ ಮಾಡಿರುವ ಅವರು, ಟಾಟಾ ಐಪಿಎಲ್ ಕ್ರಿಕೆಟ್ ಫಲಿತಾಂಶ ಗಮನಿಸಿದ ಬಳಿಕ ಮೋಸದಾಟ ನಡೆದಿದೆ ಎಂದು ಗುಪ್ತಚರ ಸಂಸ್ಥೆಗಳಲ್ಲಿ ವ್ಯಾಪಕವಾದ ಚರ್ಚೆ ನಡೆದಿದೆ.
ಅಮಿತ್ ಶಾ ಅವರ ಪುತ್ರ ಬಿಸಿಸಿಐನ ಸರ್ವಾಧಿಕಾರಿಯಾಗಿರುವುದರಿಂದ ಸರ್ಕಾರ ಈ ಬಗ್ಗೆ ತನಿಖೆ ನಡೆಸಲು ಮುಂದಾಗುವುದು ಅನುಮಾನ. ಹಾಗಾಗಿ ಪಿಐಎಲ್ನ ಅಗತ್ಯ ಬರಬಹುದು ಎಂದು ಮಾರ್ಮಿಕವಾಗಿ ಪೋಸ್ಟ್ ಮಾಡಿದ್ದಾರೆ.