ಐಪಿಎಲ್ ಗೆದ್ದ ಗುಜರಾತ್ ತಂಡದಿಂದ ರೋಡ್ ಶೋ, ರಾಜ್ಯ ಸರ್ಕಾರದಿಂದ ಉಡುಗೊರೆ

ಮಂಗಳವಾರ, 31 ಮೇ 2022 (09:20 IST)
ಅಹಮ್ಮದಾಬಾದ್: ವಿಶ್ವದ ಶ್ರೀಮಂತ ಕ್ರೀಡಾ ಕೂಟ ಎಂದೇ ಖ್ಯಾತಿ ಪಡೆದಿರುವ ಐಪಿಎಲ್ ನ 15 ನೇ ಆವೃತ್ತಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಟೈಟನ್ಸ್ ರೋಡ್ ಶೋ ನಡೆಸಿದೆ.
 

ಹಾರ್ದಿಕ್ ಹಾಗೂ ತಂಡದ ಕ್ರಿಕೆಟಿಗರು ಐಪಿಎಲ್ ಟ್ರೋಫಿಯೊಂದಿಗೆ ಅಹಮ್ಮದಾಬಾದ್ ನಲ್ಲಿ ತೆರೆದ ವಾಹನದಲ್ಲಿ ರೋಡ್ ಶೋ ನಡೆಸಿ ಸಂಭ್ರಮಿಸಿದ್ದಾರೆ. ಈ ವೇಳೆ ಸಾವಿರಾರು ಜನರು ರಸ್ತೆಗಳ ಇಕ್ಕೆಲಗಳಲ್ಲಿ ನಿಂತು ಚಾಂಪಿಯನ್ನರಿಗೆ ಜೈಕಾರ ಹಾಕಿದ್ದಾರೆ.

ಇನ್ನು, ಐಪಿಎಲ್ ‍ಗೆದ್ದು ಹೀರೋಗಳಾದ ಗುಜರಾತ್ ತಂಡದ ಕ್ರಿಕೆಟಿಗರನ್ನು ಗುಜರಾತ್ ಮುಖ್ಯಮಂತ್ರಿ ಭುಪೇಂದ್ರಭಾಯ್ ಪಟೇಲ್ ಸನ್ಮಾನಿಸಿದರು. ಹಾರ್ದಿಕ್ ಪಾಂಡ್ಯಗೆ ವಿಶೇಷ ಉಡುಗೊರೆ ನೀಡಿ ಗೌರವಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ