ಅಮ್ಮನ ಕತ್ತು ಸೀಳಿ ಕೊಂದು ಶವದ ಮುಂದೆ ಕೂತಿದ್ದ ಪುತ್ರ ಮಹಾಶಯ!
ಮನಸ್ತಾಪ ತಾರಕಕ್ಕೇರಿ ಪುತ್ರ ಯೋಗೇಶ್ ತಾಯಿಯನ್ನೇ ಕೊಲೆ ಮಾಡಿದ್ದಾನೆ. ಮೊದಲು ತಾಯಿಗೆ ನಿದ್ರೆ ಮಾತ್ರೆ ನೀಡಿದ್ದ ನಂತರ ತಲೆದಿಂಬಿನಲ್ಲಿ ಉಸಿರುಗಟ್ಟಿಸಿ ಕೊಲೆ ಮಾಡಲು ಯತ್ನಿಸಿದ್ದ. ಎರಡೂ ಬಾರಿಯೂ ತಾಯಿ ಬದುಕಿದಾಗ ಕೊನೆಗೆ ಪೇಪರ್ ಕಟ್ ಮಾಡುವ ಚಾಕುವಿನಿಂದ ಕತ್ತು ಸೀಳಿ ಹತ್ಯೆ ಮಾಡಿದ್ದಾನೆ. ಇದೀಗ ಆರೋಪಿಯನ್ನು ಬಂಧಿಸಲಾಗಿದೆ.