ಅಪ್ಪ ಮಾಡಿದ ದುಷ್ಕೃತ್ಯ ಬಯಲಿಗೆಳೆದ ಮಕ್ಕಳು
ಆರೋಪಿ ತನ್ನ ಪತ್ನಿಯ ತಲೆ ಗೋಡೆಗೆ ಹೊಡೆದು ಬರ್ಬರವಾಗಿ ಕೊಲೆ ಮಾಡಿದ್ದ. ಬಳಿಕ ಮೃತದೇಹವನ್ನು ಮನೆಯ ಟಿವಿ ಟೇಬಲ್ ಕೆಳಗೆ ಕವರ್ ಮಾಡಿ ಹಾಕಿದ್ದ.
ಮನೆಗೆ ಬಂದ ಮಕ್ಕಳು ಅಮ್ಮನ ಬಗ್ಗೆ ಪ್ರಶ್ನಿಸಿದಾಗ ಆಕೆ ಬಾಯ್ ಫ್ರೆಂಡ್ ಜೊತೆ ಓಡಿಹೋಗಿದ್ದಾಳೆ ಎಂದು ಕತೆ ಕಟ್ಟಿದ್ದ. ಇದನ್ನು ನಂಬದ ಮಕ್ಕಳು ಅಮ್ಮನನ್ನು ಹುಡುಕಾಡಲು ಶುರುಮಾಡಿದ್ದಾರೆ. ಈ ವೇಳೆ ಮೃತದೇಹ ಟಿವಿ ಟೇಬಲ್ ಕೆಳಗೆ ಪತ್ತೆಯಾಗಿದೆ. ಈ ವೇಳೆ ಆರೋಪಿ ತಲೆ ಮರೆಸಿಕೊಂಡಿದ್ದ. ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸುತ್ತಿದ್ದಾರೆ.