ಗುಟ್ಟಾಗಿ ಮದುವೆಯಾಗಿದ್ದಕ್ಕೆ ಯುವಕನ ಗುಪ್ತಾಂಗವೇ ಕಟ್!
ಯುವ ಪ್ರೇಮಿಗಳು ಮನೆಯವರಿಗೆ ಒಪ್ಪಿಗೆ ಇಲ್ಲದ ಕಾರಣ ದೆಹಲಿಗೆ ತೆರಳಿ ಗುಟ್ಟಾಗಿ ಮದುವೆಯಾಗಿದ್ದರು. ಇದು ಯುವತಿ ಮನೆಯವರನ್ನು ಕೆರಳಿಸಿತ್ತು. ಮದುವೆ ಬಳಿಕ ಯುವತಿ ಮನೆಯವರಿಂದ ರಕ್ಷಣೆ ಕೋರಿ ಪ್ರೇಮಿಗಳು ಪೊಲೀಸರ ಮೊರೆ ಹೋಗಿದ್ದರು.
ಆದರೆ ಪೊಲೀಸರಿಗೆ ದೂರು ನೀಡಿ ಹೊರ ಬರುವುದನ್ನೇ ಕಾಯುತ್ತಿದ್ದ ಯುವತಿ ಮನೆಯವರು ಯುವಕನನ್ನು ಅಪಹರಿಸಿ ಥಳಿಸಿದ್ದಲ್ಲದೆ, ಆತನ ಗುಪ್ತಾಂಗವನ್ನು ಕಟ್ ಮಾಡಿ ಕ್ರೂರತೆ ಮೆರೆದಿದ್ದಾರೆ. ಇದೀಗ ಯುವಕನ ಸ್ಥಿತಿ ಗಂಭೀರವಾಗಿದ್ದು, ದೆಹಲಿಯ ಸಫ್ದರ್ ಜಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.