ಜಡ್ಜ್ಗಳ ಭದ್ರತೆಗೆ ವಿಶೇಷ ರಕ್ಷಣಾ ಪಡೆ: ಸಿಜೆಐ ಎನ್. ವಿ. ರಮಣ ಸಲಹೆ

ಸೋಮವಾರ, 9 ಆಗಸ್ಟ್ 2021 (08:52 IST)
ನವದೆಹಲಿ(ಆ.09): ನ್ಯಾಯಾಧೀಶರಿಗೆ ಕೊಲೆ ಬೆದರಿಕೆ, ನಿಂದನೆ, ಹಲ್ಲೆ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನ್ಯಾಯಾಧೀಶರ ಭದ್ರತೆಗಾಗಿ ವಿಶೇಷ ರಕ್ಷಣಾ ಪಡೆಯನ್ನು ಸ್ಥಾಪಿಸಬೇಕು ಎಂದು ಸುಪ್ರಿಂಕೋರ್ಟ್ ಮುಖ್ಯ ನ್ಯಾಯಾಧೀಶ ಎನ್.ವಿ.ರಮಣ ಸಲಹೆ ನೀಡಿದ್ದಾರೆ.

‘ನ್ಯಾಯಾಧೀಶರಿಗೆ ಸರಿಯಾಗಿ ಕೆಲಸ ನಿರ್ವಹಿಸುವ ಸ್ವಾತಂತ್ರ್ಯ ಈಗ ಇಲ್ಲ. ಪ್ರಭಾವಿಗಳು ನ್ಯಾಯಾಧೀಶರನ್ನು ಮಾನಸಿಕ ಹಾಗೂ ದೈಹಿಕವಾಗಿ ಬೆದರಿಸುತ್ತಿದ್ದಾರೆ. ಇಂತಹ ಪ್ರಕರಣಗಳಲ್ಲಿ ಸಿಬಿಐ, ಗುಪ್ತಚರ ಇಲಾಖೆ, ಪೊಲೀಸರು ನ್ಯಾಯಾಂಗಕ್ಕೆ ಸಹಾಯ ಮಾಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜಾರ್ಖಂಡ್ ನ್ಯಾಯಾಧೀಶರ ಸಾವು ಸರಕಾರದ ನಿರ್ಲಕ್ಷ್ಯಕ್ಕೆ ಸಾಕ್ಷಿ. ಸರಕಾರ ನ್ಯಾಯಾಧೀಶರಿಗೆ ರಕ್ಷಣೆ ನೀಡದೆ ನಿರ್ಲಕ್ಷ್ಯ ವಹಿಸಿದ್ದರಿಂದ ಯುವ ನ್ಯಾಯಾಧೀಶರನ್ನು ಕಳೆದುಕೊಂಡಿದ್ದೇವೆ ಎಂದರು.
ನ್ಯಾಯಾಧೀಶರ ರಕ್ಷಣೆಗ್ರೆ ಕೈಗೊಂಡ ಕ್ರಮದ ಬಗ್ಗೆ ತಿಳಿಸಲು ರಾಜ್ಯ ಹಾಗೂ ಕೇಂದ್ರ ಸರಕಾರಕ್ಕೆ ಸೂಚಿಸಿದ ಪೀಠ, ಸೋಮವಾರ ಕೋರ್ಟ್ಗೆ ಹಾಜರಾಗಲು ಸಿಬಿಐ ಅಧಿಕಾರಿಗಳಿಗೆ ನಿರ್ದೇಶಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ