ಮೈದುನನೊಬ್ಬ ಸೆಕ್ಸ್ ಸುಖ ಕೊಡಲು ನಿರಾಕರಿಸಿದ ಅತ್ತಿಗೆಯ ಮೂಗು ಕೊಯ್ದ ಹೇಯ ಘಟನೆ ವರದಿಯಾಗಿದೆ.
ಪ್ರತಿನಿತ್ಯ ಸೆಕ್ಸ್ ಸುಖ ನೀಡುವಂತೆ ಆರೋಪಿ ಮೈದುನ, ಅತ್ತಿಗೆಯನ್ನು ಒತ್ತಾಯಿಸುತ್ತಿದ್ದ ಎನ್ನಲಾಗಿದೆ. ಆದರೆ, ಆತನ ಕೋರಿಕೆಗೆ ಕ್ಯಾರೆ ಎನ್ನಲಿಲ್ಲ. ಇದರಿಂದ ಆಕ್ರೋಶಗೊಂಡು ನೀನು ನನ್ನವಳಾಗದಿದ್ದರೆ, ಬೇರೆಯವರಿಗೂ ದೊರೆಯಲು ಬಿಡುವುದಿಲ್ಲ ಎಂದು ಕತ್ತಿಯಿಂದ ಆಕೆಯ ಮೂಗು ಕೊಯ್ದು ಹಾಕಿದ್ದಾನೆ.
ಆರೋಪಿ ಯುವಕನ ಸಹೋದರನನ್ನು ಮಹಿಳೆ ವಿವಾಹವಾಗಿದ್ದಳು. ಆದರೆ, ಎರಡು ವರ್ಷಗಳ ನಂತರ ಪತಿ ಮರಣ ಹೊಂದಿದ್ದರಿಂದ, ಆಕೆಯೊಂದಿಗೆ ಹಾಸಿಗೆ ಸುಖ ಹಂಚಿಕೊಳ್ಳಲು ಆತ್ಮಿಯನಾಗುವಂತೆ ನಾಟಕವಾಡುತ್ತಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.