ಕೊರೊನಾ ಹೆಚ್ಚಿರುವ ಪ್ರದೇಶಗಳಲ್ಲಿ ಕಠಿಣ 'ಲಾಕ್ ಡೌನ್' ಜಾರಿ : ಕೇರಳ ಸರ್ಕಾರ ಘೋಷಣೆ

ಸೋಮವಾರ, 20 ಸೆಪ್ಟಂಬರ್ 2021 (08:53 IST)
ನವದೆಹಲಿ : ಕೋವಿಡ್-19 ಸೋಂಕಿನ ಪ್ರಕರಣ ಹೆಚ್ಚಿರುವ ಪ್ರದೇಶಗಳಲ್ಲಿ ಕಠಿಣ ಲಾಕ್ ಡೌನ್ ವಿಧಿಸುವುದಾಗಿ ಕೇರಳ ಸರ್ಕಾರ ಭಾನುವಾರ (ಸೆಪ್ಟೆಂಬರ್ 19) ಘೋಷಿಸಿದೆ.

ಕೊರೊನಾ ಸೋಂಕಿನ ಜನಸಂಖ್ಯೆಯ ಅನುಪಾತ 10 ಕ್ಕಿಂತ ಹೆಚ್ಚಿರುವ ಪ್ರದೇಶಗಳಲ್ಲಿ ಕಠಿಣ ಲಾಕ್ ಡೌನ್ ನಿರ್ಬಂಧಗಳನ್ನು ಜಾರಿಗೊಳಿಸಲಾಗುವುದು ಮತ್ತು ಕೊರೊನಾ ಬಾಧಿತ ಸ್ಥಳಗಳಿಗೆ ವಾರಕ್ಕೊಮ್ಮೆ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ (ಡಿಡಿಎಂಎ) ಭೇಟಿ ನೀಡಲಿದೆ ಎಂದು ಮುಖ್ಯ ಕಾರ್ಯದರ್ಶಿ ವಿ.ಪಿ.ಜಾಯ್ ಅವರು ಆದೇಶದಲ್ಲಿ ತಿಳಿಸಿದ್ದಾರೆ.
ಕೊರೊನಾ ಬಾಧಿತ ಪ್ರದೇಶಗಳನ್ನು ವೆಬ್ ಸೈಟ್ ಗಳು ಮತ್ತು ಇತರ ಮಾಧ್ಯಮಗಳ ಮೂಲಕ ಪ್ರಚಾರ ಮಾಡಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ. 'ಜಿಲ್ಲಾಧಿಕಾರಿಗಳು ಮಾರ್ಗಸೂಚಿಗಳ ಪ್ರಕಾರ ಸೂಕ್ಷ್ಮ ನಿಯಂತ್ರಿತ ವಲಯಗಳಿಗೆ ಮತ್ತಷ್ಟು ಸೂಚನೆ ನೀಡಬೇಕು ಮತ್ತು ಅದರಲ್ಲಿ ಲಾಕ್ ಡೌನ್ ನಿರ್ಬಂಧಗಳನ್ನು ಜಾರಿಗೊಳಿಸಬೇಕು' ಎಂದು ಜಾಯ್ ಹೇಳಿದರು.
ಕೇರಳದಲ್ಲಿ ಕಳೆದ 24 ಗಂಟೆಯಲ್ಲಿ 19,653 ತಾಜಾ ಕೊರೊನಾ ವೈರಸ್ ಸೋಂಕು ಪ್ರಕರಣಗಳು ಮತ್ತು 152 ಸಾವುನೋವುಗಳು ವರದಿಯಾಗಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 45,08,493 ಕ್ಕೇರಿದೆ ಮತ್ತು ಸಾವಿನ ಸಂಖ್ಯೆ 23,591, ಕ್ಕೆ ಏರಿದೆ ಎಂದು ಮೂಲಗಳು ತಿಳಿಸಿದೆ. ರಾಜ್ಯದಲ್ಲಿ ಪ್ರಸ್ತುತ 1,73,631 ಸಕ್ರಿಯ ಪ್ರಕರಣಗಳಿವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ