ಇಂದಿನಿಂದ ಮಹಾರಾಷ್ಟ್ರ ನರ್ಸ್ಗಳಿಂದ ಮುಷ್ಕರ

ಶನಿವಾರ, 28 ಮೇ 2022 (07:27 IST)
ಮುಂಬೈ : ನರ್ಸ್ಗಳ ನೇಮಕಾತಿಯನ್ನು ಖಾಸಗಿ ಏಜೆನ್ಸಿಗೆ ಹೊರಗುತ್ತಿಗೆ ನೀಡುವ ರಾಜ್ಯ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ಮಹಾರಾಷ್ಟ್ರದ ಸರ್ಕಾರಿ ಆಸ್ಪತ್ರೆಗಳ 15,000ಕ್ಕೂ ಹೆಚ್ಚು ನರ್ಸ್ಗಳು ಇಂದಿನಿಂದ ಅನಿರ್ದಿಷ್ಟಾವಧಿ ಮುಷ್ಕರ ಹೂಡಲಿದ್ದಾರೆ.

ನರ್ಸ್ಗಳ ನೇಮಕಾತಿಯನ್ನು ಖಾಸಗಿ ಏಜೆನ್ಸಿಗಳಿಗೆ ಹೊರಗುತ್ತಿಗೆ ನೀಡುವ ಬಗ್ಗೆ ಸರ್ಕಾರ ನಿರ್ಧರಿಸಿದೆ. ಹೀಗಾಗಿ ಈ ನಿರ್ಧಾರವನ್ನು ಹೊಂಪಡೆಯುವಂತೆ ಒತ್ತಾಯಿಸಿ ಸರ್ಕಾರದ ವಿರುದ್ಧ ನರ್ಸ್ಗಳು ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಮುನ್ನ ಮೇ 27-28 ರಂದು ಎರಡು ದಿನಗಳ ಕಾಲ ಮಹಾರಾಷ್ಟ್ರ ರಾಜ್ಯ ನರ್ಸ್ಗಳ ಸಂಘ (ಎಂಎಸ್ಎನ್ಎ) ಮುಷ್ಕರಕ್ಕೆ ಕರೆ ನೀಡಿತ್ತು. 

ಈ ಬಗ್ಗೆ ಶುಕ್ರವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಎಂಎಸ್ಎನ್ಎ ಪ್ರಧಾನ ಕಾರ್ಯದರ್ಶಿ ಸುಮಿತ್ರಾ ತೋಟೆ ಅವರು ನಮ್ಮ ಯಾವುದೇ ಬೇಡಿಕೆಗಳನ್ನು ಈಡೇರಿಸಲಾಗಿಲ್ಲ. ಆದ್ದರಿಂದ ನಾವು ಮೇ 28 ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿದ್ದೇವೆ ಎಂದು ತಿಳಿಸಿದ್ದಾರೆ. 

ನರ್ಸ್ಗಳ ನೇಮಕಾತಿಯನ್ನು ಹೊರಗುತ್ತಿಗೆ ನೀಡಿದರೆ, ಅವರು ಶೋಷಣೆಗೆ ಒಳಗಾಗುತ್ತಾರೆ ಮತ್ತು ಕಡಿಮೆ ಸಂಭಾವನೆ ಪಡೆಯುತ್ತಾರೆ. ಮುಂಬೈನಲ್ಲಿ ಸುಮಾರು 1,500 ಸೇರಿದಂತೆ ಸರ್ಕಾರಿ ಆಸ್ಪತ್ರೆಗಳ 15,000 ಕ್ಕೂ ಹೆಚ್ಚು ನರ್ಸ್ಗಳು ಪ್ರತಿಭಟನೆ ನಡೆಸಲಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ