ಇಂಡೋನೇಷ್ಯಾ ಕಾನೂನಿಗೆ ಭಾರೀ ವಿರೋಧ

ಮಂಗಳವಾರ, 6 ಡಿಸೆಂಬರ್ 2022 (16:25 IST)
ಜಕಾರ್ತ : ವಿಹಾಹ ಪೂರ್ವ ಸೆಕ್ಸ್ ತಡೆಯಲು ಇಂಡೋನೇಷ್ಯಾ ಸರ್ಕಾರ ಹೊಸ ಕ್ರಿಮಿನಲ್ ಕಾನೂನು ಅಂಗೀಕರಿಸಿದ್ದು, ದೇಶದಲ್ಲಿ ಭಾರೀ ವಿರೋಧ ವ್ಯಕ್ತವಾಗಿದೆ.

ಈ ಕಾನೂನು ವಿವಾಹಪೂರ್ವ ಲೈಂಗಿಕತೆ ಹಾಗೂ ಸಹಬಾಳ್ವೆಯನ್ನು ಕಾನೂನುಬಾಹಿರಗೊಳಿಸುತ್ತದೆ. ಜೊತೆಗೆ ಆಗ್ನೇಯ ಏಷ್ಯಾದಂತಹ ರಾಷ್ಟ್ರಗಳಲ್ಲಿ ಸ್ವಾತಂತ್ರ್ಯವನ್ನು ದುರ್ಬಲಗೊಳಿಸಬಹುದು.

ಹೀಗಾಗಿ ಕಾನೂನನ್ನು ರದ್ದುಗೊಳಿಸುವಂತೆ ಪ್ರತಿಭಟನೆಗಳು ಎದ್ದಿವೆ.   ಸಂಸತ್ತಿನಲ್ಲಿ ಸರ್ವಾನುಮತದಿಂದ ಅಂಗೀಕರಿಸಲ್ಪಟ್ಟ ಹೊಸ ಕ್ರಿಮಿನಲ್ ಕಾನೂನು, 1946 ರಲ್ಲಿ ಇಂಡೋನೇಷ್ಯಾ ಸ್ವಾತಂತ್ರ್ಯದ ನಂತರ ಜಾರಿಯಲ್ಲಿದ್ದ ಚೌಕಟ್ಟನ್ನು ಮತ್ತೆ ಬದಲಾಯಿಸುತ್ತದೆ.

ಈ ಕಾನೂನು ಇಂಡೋನೇಷ್ಯಾ ಜನರಿಗೆ ಮಾತ್ರವಲ್ಲದೇ ವಿದೇಶಿಯರಿಗೂ ಅನ್ವಯಿಸುತ್ತದೆ. ಅಲ್ಲದೇ ದೇಶದ ಅಧ್ಯಕ್ಷರು, ರಾಜ್ಯ ಸಂಸ್ಥೆಗಳು ಹಾಗೂ ದೇಶದ ರಾಷ್ಟ್ರೀಯ ಸಿದ್ಧಾಂತವನ್ನು ಅವಮಾನಿಸುತ್ತದೆ ಎಂದು ಪ್ರತಿಭಟನಾಕಾರರು ದೂರಿದ್ದಾರೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ