ಮಕ್ಕಳ ವಸತಿಗೃಹದಲ್ಲಿ ಮೇಲ್ವಿಚಾರಕನಾಗಿ ಕೆಲಸ ಮಾಡುತ್ತಿದ್ದ ಆರೋಪಿ ಎಂಬಾತನೇ ಈ ದುಷ್ಕೃತ್ಯಗೈದ ಆರೋಪಿಯಾಗಿದ್ದಾನೆ. ವಸತಿನಿಲಯದಲ್ಲಿ 13 ಬಾಲಕಿಯರು ಮತ್ತು 17 ಬಾಲಕರು ವಾಸವಾಗಿದ್ದು, ಅವರು ಹತ್ತಿರದಲ್ಲಿರುವ ಸರಕಾರಿ ಅನುದಾನಿತ ಶಾಲೆಯಲ್ಲಿ ಅಧ್ಯಯನ ನಡೆಸುತ್ತಿದ್ದಾರೆ. ಅಂತಹ ಬಾಲಕಿಯರ ಮೇಲೆ ಅತ್ಯಾಚಾರವೆಸಗಿ ಇದೀಗ ಆರೋಪಿ ಪರಾರಿಯಾಗಿದ್ದಾನೆ. ಪೊಲೀಸರು ಆರೋಪಿಯ ಬಂಧನಕ್ಕೆ ಜಾಲ ಬೀಸಿದ್ದಾರೆ.