ಯುವತಿಯ ಜನ್ಮದಿನ ಸಂಭ್ರಮಕ್ಕೆ ರೇಪ್ ಕೊಡುಗೆ ನೀಡಿದ ಗೆಳೆಯರು

ಬುಧವಾರ, 6 ಡಿಸೆಂಬರ್ 2023 (10:19 IST)
ಯುವತಿಯ ಪರಿಚಯವನ್ನೇ ಬಂಡವಾಳ ಮಾಡಿಕೊಂಡ ಗೆಳೆಯನೊಬ್ಬ ಆಕೆಯನ್ನು ಗೆಳೆಯರೊಂದಿಗೆ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಗ್ಯಾಂಗ್‌ರೇಪ್ ಎಸಗಿದ ಘಟನೆ ದೆಹಲಿಯಲ್ಲಿ ವರದಿಯಾಗಿದೆ.
 
18 ವರ್ಷದ ಯುವತಿಯೊಬ್ಬಳು  ತನ್ನ ಪರಿಚಿತರಿಂದಲೇ ಸಾಮೂಹಿಕ ಅತ್ಯಾಚಾರಕ್ಕೊಳಗಾದ ಘಟನೆ  ರಾಷ್ಟ್ರ ರಾಜಧಾನಿಯಲ್ಲಿ ನಡೆದಿದೆ. ಈ ಕುರಿತು ಆರ್.ಕೆ. ಪುರಮ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪರಾರಿಯಾಗಿರುವ ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ. 
 
ಪೀಡಿತೆ ನೀಡಿರುವ ದೂರಿನ ಪ್ರಕಾರ, ಜಾಬ್ ಏಜೆನ್ಸಿಯ ಮೂಲಕ ಕೆಲಸ ಕೊಡಿಸುವ ನೆಪದೊಂದಿಗೆ ಆರೋಪಿಗಳಲ್ಲಿ ಒಬ್ಬ ಆಕೆಯ ಸ್ನೇಹ ಸಂಪಾದಿಸಿದ್ದ. ಅವರಿಬ್ಬರಲ್ಲಿ  ಆತ್ಮೀಯ ಸ್ನೇಹ ಬೆಳೆದಿತ್ತು. ಕಳೆದ ಶುಕ್ರವಾರ  ಆಕೆಯ 18 ನೇ ವರ್ಷದ ಜನ್ಮದಿನವಾಗಿತ್ತು. ಅವಳಿಗೆ ಶುಭಾಶಯ ಕೋರಿದ ಆರೋಪಿಗಳಲ್ಲಿ ಒಬ್ಬ ನಿನ್ನ ಬರ್ತಡೇ ಆಚರಿಸೋಣ ಎಂದು ಆಕೆಯನ್ನು ಕರೆದೊಯ್ದ. ಆತನ ಸ್ನೇಹಿತನು ಕೂಡ ಅವರನ್ನು ಸೇರಿಕೊಂಡ.
 
ಯುವತಿಯನ್ನು ಅಜ್ಞಾತ ಸ್ಥಳಕ್ಕೆ ಕರೆದೊಯ್ದ ಆರೋಪಿಗಳು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಯುವತಿಯನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಲಾಗಿದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ