ಪ್ರಾಂಶುಪಾಲರ ವಿರುದ್ಧ ಲೈಂಗಿಕ ಕಿರುಕುಳದ ದೂರು ನೀಡಿದ ಯುವತಿಗೆ ಆದ ದುರ್ಗತಿ ಏನು ಗೊತ್ತಾ?

ಶನಿವಾರ, 20 ಏಪ್ರಿಲ್ 2019 (12:26 IST)
ಢಾಕಾ : ಪ್ರಾಂಶುಪಾಲರ ವಿರುದ್ಧ ಲೈಂಗಿಕ ಕಿರುಕುಳ ದೂರು ನೀಡಿದಕ್ಕೆ ಯುವತಿಗೆ ಬೆಂಕಿ ಹಚ್ಚಿ ಕೊಲೆ ಮಾಡಿದ ಆಘಾತಕಾರಿ ಘಟನೆ ಬಾಂಗ್ಲಾ ದೇಶದಲ್ಲಿ ನಡೆದಿದೆ.


ನುಸ್ರತ್ ಜಹಾನ್ ರಫಿ(18) ಕೊಲೆಯಾದ ಯುವತಿ. ಪ್ರಾಂಶುಪಾಲ ಸಿರಾಜ್ ಉದ್ ದೌಲಾ ಎಂಬಾತ ನುಸ್ರತ್ ಜಹಾನ್ ರಫಿಯನ್ನು  ತನ್ನ ಕೊಠಡಿಗೆ ಕರೆಸಿಕೊಂಡು, ಆಕೆಯನ್ನು ಸ್ಪರ್ಶಿಸಿ, ಅನುಚಿತವಾಗಿ ವರ್ತಿಸಿದ್ದಾನೆ. ಇದರಿಂದ ಕೋಪಗೊಂಡ ಯುವತಿ ಪ್ರಾಂಶುಪಾಲರ ವಿರುದ್ಧ ದೂರು ನೀಡಿದ್ದಾಳೆ.


ಈ ಘಟನೆಯ ಬಳಿಕ ದೇಶಾದ್ಯಂತ ಪ್ರತಿಭಟನೆ ನಡೆದು ಪ್ರಾಂಶುಪಾಲನ ಬಂಧನಕ್ಕೆ ಒತ್ತಾಯಿಸಲಾಗಿದ್ದು, ಒತ್ತಡಕ್ಕೆ ಮಣಿದ ಪೊಲೀಸರು ಪ್ರಾಂಶುಪಾಲನನ್ನು ಬಂಧಿಸಿದ್ದಾರೆ. ಇದರಿಂದ ಆಕ್ರೋಶಗೊಂಡ ಪ್ರಾಂಶುಪಾಲನ ಕಡೆಯವರು ನುಸ್ರತ್ ಳನ್ನು ಶಾಲೆಯ ಆವರಣದಲ್ಲೇ ಸುಟ್ಟು ಹಾಕಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ 17 ಮಂದಿಯನ್ನು ಬಂಧಿಸಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ