ಸುಬ್ರಮಣಿಯನ್ ಸ್ವಾಮಿ ನನ್ನ ಹೀರೋ: ಉಮಾ ಭಾರತಿ

ಸೋಮವಾರ, 6 ಜೂನ್ 2016 (14:11 IST)
ಅಯೋಧ್ಯೆ ರಾಮ ಮಂದಿರ ನಿರ್ಮಾಣ ವಿಚಾರದಲ್ಲಿ ಸುಬ್ರಮಣಿಯನ್ ಸ್ವಾಮಿ(ಬಿಜೆಪಿ ರಾಜ್ಯಸಭಾ ಸದಸ್ಯ) ಅವರ ಮಾತುಗಳಲ್ಲಿ ನನಗೆ ಸಂಪೂರ್ಣ ವಿಶ್ವಾಸವಿದ್ದು, ಅವರೇ ನನ್ನ ಹೀರೋ ಎಂದು ಕೇಂದ್ರ ಜಲ ಸಂಪನ್ಮೂಲ ಸಚಿವೆ ಉಮಾ ಭಾರತಿ ಹೇಳಿದ್ದಾರೆ.

ಕಳೆದ ಕೆಲ ದಿನಗಳ ಹಿಂದೆ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತ ಸ್ವಾಮಿ ಈ ವರ್ಷ ಮುಗಿಯುವುದರೊಳಗೆ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕಾರ್ಯ ಆರಂಭವಾಗಲಿವೆ. ಮುಂದಿನ ವರ್ಷ ರಾಮ ನವಮಿ ಆಚರಣೆ ಅಯೋಧ್ಯೆಯಲ್ಲಿಯೇ ಎಂದಿದ್ದರು.ಈ ಕುರಿತು ಪ್ರತಿಕ್ರಿಯಿಸುತ್ತ ಸಚಿವೆ ಈ ಮಾತುಗಳನ್ನಾಡಿದ್ದಾರೆ.
 
ರಾಷ್ಟ್ರೀಯ ಸುದ್ದಿವಾಹಿನಿಯೊಂದರ ಜತೆ ಮಾತನಾಡುತ್ತಿದ್ದ ಅವರು, ನಾನು ಸುಬ್ರಮಣಿಯನ್ ಸ್ವಾಮಿ ಅವರನ್ನು ಬಹಳ ಗೌರವಿಸುತ್ತೇನೆ. ಅವರು ನನ್ನ ಹೀರೋ. ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಲ್ಪಟ್ಟಾಗ ನಾನು 15 -16 ವರ್ಷದವಳಾಗಿದ್ದೆ. ಆಗಲೇ ಡಾ.ಸ್ವಾಮಿ ಮತ್ತು ಜಾರ್ಜ್ ಫರ್ನಾಂಡಿಸ್ (ಮಾಜಿ ರಕ್ಷಣಾ ಸಚಿವ)  ನನ್ನ ಹೀರೋಗಳಾಗಿದ್ದರು. ಸ್ವಾಮಿ ಸದಾ ನನಗೆ ನಾಯಕರಾಗಿಯೇ ಕಾಣುತ್ತಾರೆ.ಹೀಗಾಗಿ ಅವರೇನೇ ಹೇಳಿದರೂ ನಾನು ನಂಬುತ್ತೇನೆ ಎಂದು ಹೇಳಿದ್ದಾರೆ.
 
ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ತಾವು ಮುಖ್ಯಮಂತ್ರಿ ಅಭ್ಯರ್ಥಿ ಎಂಬ ವದಂತಿಯನ್ನು ಅಲ್ಲಗಳೆದಿರುವ ಅವರು ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೇರುವ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ