ಯಾತ್ರೆಗಿಂತ ರಾಹುಲ್ ಗಾಂಧಿಗೆ ಪ್ರಚಾರವೇ ಹೆಚ್ಚಾಯ್ತು: ಸುಬ್ರಮಣಿಯನ್ ಸ್ವಾಮಿ ಟೀಕೆ
ರಾಹುಲ್ ಕೈಲಾಸ ಯಾತ್ರೆ ಮಾಡುತ್ತಿರುವ ಫೋಟೋಗಳನ್ನು ತನ್ನ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿರುವ ಕಾಂಗ್ರೆಸ್ ಇದರ ಜತೆಗೆ ರಾಹುಲ್ ಎಷ್ಟು ದೂರ ನಡೆದರು, ಎಷ್ಟು ಕ್ಯಾಲೋರಿ ಇಳಿಸಿಕೊಂಡರು ಎಂದೆಲ್ಲಾ ವಿವರ ನೀಡುತ್ತಿದೆ.
ಹೀಗಾಗಿ ರಾಹುಲ್ ಕೈಲಾಸ ಯಾತ್ರೆ ಕೈಗೊಂಡಿರುವುದು ಕೇವಲ ಪ್ರಚಾರಕ್ಕಷ್ಟೇ. ಇದರಲ್ಲಿ ಧಾರ್ಮಿಕ ಶ್ರದ್ಧೆ ಮುಖ್ಯವಲ್ಲ ಎಂದು ಸುಬ್ರಮಣಿಯನ್ ಸ್ವಾಮಿ ಟೀಕಿಸಿದ್ದಾರೆ. ಇದಕ್ಕೂ ಮೊದಲು ಬಿಜೆಪಿ ನಾಯಕ ಗಿರಿರಾಜ್ ಸಿಂಗ್ ರಾಹುಲ್ ಕೈಲಾಸ ಯಾತ್ರೆ ಕೈಗೊಂಡಿಲ್ಲ. ಇದು ಎಡಿಟೆಡ್ ಫೋಟೋ ಎಂದು ಆಪಾದಿಸಿದ್ದರು.