ಹಿಂದೂ ಯುವತಿ ಅಖಿಲಾ ಅಶೋಕ್ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡು ಮುಸ್ಲಿಂ ವ್ಯಕ್ತಿ ಶಫಿನ್ ಜಹಾನ್ ಎಂಬಾತನನ್ನು ವಿವಾಹವಾಗಿರುವುದು ಪ್ರತ್ಯೇಕ ಘಟನೆಯಲ್ಲ. ಪೋಷಕರೊಂದಿಗೆ ಭಿನ್ನಾಭಿಪ್ರಾಯವಿರುವ ಅನೇಕ ಹಿಂದೂ ಯುವತಿಯರನ್ನು ಇಸ್ಲಾಂ ಧರ್ಮಕ್ಕೆ ಮತಾಂತರಗೊಳಿಸುವ ಹಿಂದೆ ಕೆಲವು ವ್ಯಕ್ತಿಗಳ ಕೈವಾಡವಿದೆ. ಇತರ ಮತಾಂತರ ಪ್ರಕರಣಗಳಲ್ಲೂ ಇದೇ ವ್ಯಕ್ತಿಗಳ ಕೈವಾಡ ಕಂಡುಬಂದಿದೆ ಎಂದು ಎನ್‌ಐಎ ಪರ ವಕೀಲ ಮಣಿದಂರ್ ಸಿಂಗ್ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.