‘ನಾವು ನಿಮ್ಮ ಕಣ್ಣಿಗೆ ನರಹಂತಕ ಹುಲಿಗಳ ಹಾಗೆ ಕಾಣ್ತೀವಾ?’ ಸುಪ್ರೀಂಕೋರ್ಟ್ ಪ್ರಶ್ನೆ

ಶನಿವಾರ, 22 ಸೆಪ್ಟಂಬರ್ 2018 (08:55 IST)
ನವದೆಹಲಿ: ನಮ್ಮನ್ನು ನರಹಂತಕ ಹುಲಿಗಳ ರೀತಿ ಕಾಣುತ್ತಾ ನಿಮ್ಮ ಕಣ್ಣಿಗೆ? ನಾವು ಅಂತಹವರಲ್ಲ. ರಾಜ್ಯಗಳು ನಮ್ಮನ್ನು ಕಂಡು ಭಯ ಬೀಳುವ ಅಗತ್ಯವಿಲ್ಲ.. ಹೀಗಂತ ಸುಪ್ರೀಂಕೋರ್ಟ್ ರಾಜ್ಯಗಳಿಗೆ ಹೇಳಿದೆ.

ಗಣಿ ಕಂಪನಿಯೊಂದನ್ನು ಆಂಧ್ರ ಸರ್ಕಾರ ಸುಪ್ರೀಂಕೋರ್ಟ್ ಪ್ರಶ್ನಿಸಬಹುದೆಂಬ ಭಯಕ್ಕೆ ಅಕ್ರಮ ಎಂದು ಷರಾ ಹೊರಡಿಸಿದ ಪ್ರಕರಣವನ್ನು ವಿಚಾರಣೆ ನಡೆಸುವಾಗ ಉಚ್ಛ ನ್ಯಾಯಾಲಯ ಈ ರೀತಿ ಹೇಳಿದೆ.

ಟ್ರಿಮಿಕ್ಸ್ ಕಂಪನಿಯ ಗಣಿಗಾರಿಕೆ ರದ್ದುಗೊಳಿಸಿ ಅಲ್ಲಿನ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ ನಲ್ಲಿ ಸಲ್ಲಿಕೆಯಾದ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಮದನ್ ಬಿ ಲೋಕೂರ್ ಮತ್ತು ದೀಪಕ್ ಗುಪ್ತಾ ರಾಜ್ಯ ಸರ್ಕಾರಗಳಿಗೆ ಸುಪ್ರೀಂಕೋರ್ಟ್ ಬಗ್ಗೆ ಭಯದ ವಾತಾವರಣ ಬೇಡ ಎಂದು ಸಲಹೆ ನೀಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ