ವಿಚ್ಛೇದನ ಅರ್ಜಿಯ ತೀರ್ಪು ಕೋರ್ಟ್ ನಲ್ಲಿ ಬಾಕಿ ಇದ್ದರೂ ಎರಡನೇ ಮದುವೆ ಸಿಂಧು ಎಂದ ಸುಪ್ರೀಂ

ಸೋಮವಾರ, 27 ಆಗಸ್ಟ್ 2018 (08:49 IST)
ನವದೆಹಲಿ : ದಂಪತಿಗಳು ಡಿವೋರ್ಸ್ ಗೆ ಅರ್ಜಿ ಸಲ್ಲಿಸಿ ತೀರ್ಪು ಬರುವ ಮೊದಲೆ ಅವರು ಎರಡನೇ ಮದುವೆಯಾಗಬಹುದು ಎಂದು ಸುಪ್ರೀಂಕೋರ್ಟ್ ಹೇಳಿದೆ.


ಈ ಹಿಂದೆ ಡಿವೋರ್ಸ್ ಗೆ ಅರ್ಜಿ ಸಲ್ಲಿಸಿ ತೀರ್ಪು ಬರುವವರೆಗೂ ಕಾಯದೆ ದಂಪತಿಗಳು ಎರಡನೇ ಮದುವೆಯಾದರೆ ಅದು ಅಸಿಂಧು ಎಂದು ಹೇಳಲಾಗುತ್ತಿತ್ತು.


ಆದರೆ ಈಗ ಕೌಟುಂಬಿಕ ಕೋರ್ಟ್​ಗಳು ನೀಡಿರುವ ಆದೇಶ ಪ್ರಶ್ನಿಸಿ ಪತಿ ಅಥವಾ ಪತ್ನಿ ಹೈಕೋರ್ಟ್​ಗೆ ಸಲ್ಲಿಸಿದ್ದ ಅರ್ಜಿಯ ತೀರ್ಪು ಬಾಕಿಯಿದ್ದರೂ, ಮೊದಲ ಮದುವೆಯ ದಂಪತಿಗಳ ನಡುವೆ ಪರಸ್ಪರ ಒಪ್ಪಿಗೆ ಇದ್ದು, ಈ ಕುರಿತು ಹೈಕೋರ್ಟ್​ಗೆ ಲಿಖಿತ ಮಾಹಿತಿ ನೀಡಿದರೆ ಸಾಕು ಅವರು ಎರಡನೇ ಮದುವೆಯಾಗಬಹುದು. ಕೇಸಿನ ಅಂತಿಮ ತೀರ್ಪು ಬರುವವರೆಗೆ ಕಾಯಬೇಕಿಲ್ಲ ಎಂದು ಸುಪ್ರೀಂಕೋರ್ಟ್ ನ್ಯಾಯಮೂರ್ತಿ ನಾಗೇಶ್ವರ ರಾವ್ ನೇತೃತ್ವದ ಪೀಠ ಈ ತೀರ್ಪು ನೀಡಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ