ಜಾತಿ ಸಮೀಕ್ಷೆಗೆ ಮಧ್ಯಂತರ ತಡೆ ನೀಡಲು ಸುಪ್ರೀಂ ನಕಾರ

ಬುಧವಾರ, 9 ಆಗಸ್ಟ್ 2023 (13:58 IST)
ನವದೆಹಲಿ : ಬಿಹಾರ ಸರ್ಕಾರದಿಂದ ನಡೆಯುತ್ತಿರುವ ಜಾತಿ ಸಮೀಕ್ಷೆಗೆ ಮಧ್ಯಂತರ ತಡೆ ನೀಡಲು ಸುಪ್ರೀಂಕೋರ್ಟ್ ನಿರಾಕರಿಸಿದೆ.
 
ಜಾತಿ ಸಮೀಕ್ಷೆಯ ಸಿಂಧುತ್ವವನ್ನು ಎತ್ತಿಹಿಡಿಯುವ ಪಾಟ್ನಾ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಆ.14 ರಂದು ವಿಚಾರಣೆ ನಡೆಸುವುದಾಗಿ ಹೇಳಿದೆ.

ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಮುಕುಲ್ ರೋಹಟಗಿ, ಜಾತಿ ಸಮೀಕ್ಷೆಗೆ ವಿರಾಮ ಬೇಕು ಎಂದು ಮನವಿ ಮಾಡಿದರು. ಇದಕ್ಕೆ ಉತ್ತರಿಸಿದ ನ್ಯಾಯಮೂರ್ತಿ ಖನ್ನಾ, ಸಮೀಕ್ಷೆ ಸ್ವಲ್ಪ ಕಾಲ ಮುಂದುವರಿಯಲಿ. ಸಮೀಕ್ಷೆ 80% ರಷ್ಟು ಪೂರ್ಣಗೊಂಡಿದ್ದರೆ 90%ಕ್ಕೆ ತಲುಪಲಿ. ನಾವು ಈ ಮನವಿಯನ್ನು ಆಗಸ್ಟ್ 14 ರಂದು ವಿವರವಾಗಿ ಆಲಿಸುತ್ತೇವೆ ಎಂದು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ