ತಾಜ್ ಮಹಲ್ ನ್ನು ರಕ್ಷಿಸಿ, ಇಲ್ಲವಾದರೆ ಧ್ವಂಸಗೊಳಿಸಿ: ಕೇಂದ್ರಕ್ಕೆ ಸುಪ್ರೀಂ ತರಾಟೆ
ತಾಜ್ ಮಹಲ್ ನನ್ನು ಒಂದೋ ರಕ್ಷಿಸಿ, ಇಲ್ಲಾ ನಾಶ ಮಾಡಿ ಎಂದು ಕೇಂದ್ರ ಪರಿಸರ ಮತ್ತು ಅರಣ್ಯ ಇಲಾಖೆಗೆ ಸುಪ್ರೀಂಕೋರ್ಟ್ ತಾಕೀತು ಮಾಡಿದೆ. ಪರಿಸರ ಖಾತೆಯ ಇಲಾಖೆಯ ನಿರ್ಲಕ್ಷ್ಯ ಧೋರಣೆಗೆ ಬೇಸರ ವ್ಯಕ್ತಪಡಿಸಿರುವ ಸುಪ್ರೀಂಕೋರ್ಟ್ ಜುಲೈ 31 ರಿಂದ ಈ ಬಗ್ಗೆ ವಿಚಾರಣೆ ಕೈಗೆತ್ತಿಕೊಳ್ಳುವುದಾಗಿ ತಿಳಿಸಿದೆ.
ವಾತಾವರಣ ಮಾಲಿನ್ಯದಿಂದಾಗಿ ತಾಜ್ ಮಹಲ್ ದಿನೇ ದಿನೇ ತನ್ನ ಹೊಳಪು ಕಳೆದುಕೊಳ‍್ಳುತ್ತಿದೆ. ಇದಕ್ಕೆ ನಿಖರ ಕಾರಣವೇನೆಂದು ಅರಣ್ಯ ಮತ್ತು ಪರಿಸರ ಇಲಾಖೆಗೆ ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ಹೀಗಾಗಿ ಇದರ ಬಗ್ಗೆ ತಜ್ಞರ ಸಮಿತಿಯೊಂದನ್ನು ರಚಿಸಿ ನಿಖರ ಕಾರಣ ಪತ್ತೆ ಮಾಡುವಂತೆ ಸುಪ್ರೀಂಕೋರ್ಟ್ ಆದೇಶಿಸಿದೆ.