ರೈತರಿಗೆ ಬಂಪರ್ ಆಫರ್ ಕೊಡಲು ಕೇಂದ್ರ ಇಂದು ಮಹತ್ವದ ಘೋಷಣೆ!

ಬುಧವಾರ, 4 ಜುಲೈ 2018 (09:07 IST)
ನವದೆಹಲಿ: ರೈತರಿಗೆ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹೆಚ್ಚಿನ ಕೊಡುಗೆ ನೀಡಿಲ್ಲ ಎಂಬ ಟೀಕೆಗಳಿಗೆ ಉತ್ತರ ನೀಡುವಂತೆ ಇಂದು ಕೇಂದ್ರ ಆರ್ಥಿಕ ವ್ಯವಹಾರಗಳ ಕುರಿತ ಸಂಪುಟ ಸಭೆ ನಡೆಯಲಿದ್ದು, ರೈತರಿಗೆ ಬಂಪರ್ ಕೊಡುಗೆ ನೀಡಲಿದೆ ಎನ್ನಲಾಗಿದೆ.

ಭತ್ತ ಮತ್ತು ರಾಗಿ ಬೆಳೆಗಾರರಿಗೆ ಬೆಂಬಲ ಬೆಲೆಯನ್ನು ಭಾರೀ ಪ್ರಮಾಣದಲ್ಲಿ ಹೆಚ್ಚಳ ಮಾಡುವುದು ಮತ್ತು ಮುಂಗಾರಿನ ಸುಮಾರು 14 ಬೆಳೆಗಳಿಗೆ ಬೆಂಬಲ ಬೆಲೆ ಘೋಷಣೆ ಮಾಡುವ ನಿಟ್ಟಿನಲ್ಲಿ ಈ ಸಂಪುಟ ಸಭೆ ನಡೆಯಲಿದೆ.

ಭತ್ತಕ್ಕೆ 200 ರೂ. ಮತ್ತು ರಾಗಿಗೆ 900 ರೂ. ಬೆಂಬಲ ಬೆಲೆ ಘೋಷಿಸುವ ಸಾಧ್ಯತೆಯಿದೆ. ಕೇಂದ್ರ ಈ ಘೋಷಣೆ ಮಾಡಿದರೆ ರೈತರಿಗೆ ಭಾರೀ ಲಾಭವಾಗಲಿದೆ. ಇದರಿಂದ ರೈತರಿಗೆ ಭಾರೀ ಲಾಭವಾಗಲಿದ್ದು, ಮೋದಿ ಸರ್ಕಾರದ ಮಹತ್ವದ ನಿರ್ಧಾರ ಇದಾಗಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ