ಸೀಮಿತ ದಾಳಿಯಿಂದ ಭಾರತೀಯ ಸೇನೆಯ ಪ್ರತಿಷ್ಠೆ ಹೆಚ್ಚಾಗಿದೆ: ಪ್ರಧಾನಿ ಮೋದಿ
ಮಂಗಳವಾರ, 18 ಅಕ್ಟೋಬರ್ 2016 (14:45 IST)
ಪಾಕಿಸ್ತಾನ ಆಕ್ರಮಿತ ಕಾಶ್ಮಿರದ ಉಗ್ರರ ಶಿಬಿರಗಳ ಮೇಲೆ ನಡೆದ ಸೀಮಿತ ದಾಳಿಯ ನಂತರ ಭಾರತೀಯ ಸೇನೆಯ ಪ್ರತಿಷ್ಠೆ ಹೆಚ್ಚಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ಭಾರತೀಯ ಸೇನೆಯನ್ನು ಅಭಿನಂದಿಸಿದ ಮೋದಿ, ಪ್ರತಿಯೊಬ್ಬರು ಭಾರತೀಯ ಸೇನೆಯ ಬಗ್ಗೆ ಮಾತನಾಡುತ್ತಿದ್ದಾರೆ. ನಮ್ಮ ಸೇನೆ ಯಾರಿಗಿಂತ ಕಡಿಮೆಯಿಲ್ಲ ಎನ್ನುವುದು ಸಾಬೀತುಪಡಿಸಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಇಸ್ರೇಲ್ ಕೂಡಾ ಇಂತಹ ಸೀಮಿತ ದಾಳಿಗಳನ್ನು ನಡೆಸಿದೆ. ಅದರಂತೆ, ಭಾರತೀಯ ಸೇನೆ ತಾನು ಕೂಡಾ ಕಮ್ಮಿಯಿಲ್ಲ ಎನ್ನುವುದು ತೋರಿಸಿದೆ ಎಂದರು.
ಹಿಮಾಚಲ ಪ್ರದೇಶ ದೇವಭೂಮಿ ಮತ್ತು ವೀರಭೂಮಿಯಾಗಿದೆ. ಅನೇಕ ಸೇನಾ ವೀರರು ರಾಜ್ಯದಲ್ಲಿ ಜನ್ಮತಾಳಿ ದೇಶದ ಸೇನೆಗೆ ಅಪಾರ ಸೇವೆ ಸಲ್ಲಿಸಿದ್ದಾರೆ ಎಂದರು.
ಒನ್ ರ್ಯಾಂಕ್ ಒನ್ ಪೆನ್ಶನ್ ಬಗ್ಗೆ ಮಾತನಾಡಿದ ಮೋದಿ, ನಿಮ್ಮ ಹಕ್ಕುಗಳನ್ನು ಕೊಡಲು ಕೇಂದ್ರ ಸರಕಾರ ಸದಾ ಬದ್ಧವಾಗಿದೆ. ಯಾವುದೇ ರೀತಿಯ ಅನುಮಾನ ಬೇಡ ಎಂದು ಮಾಜಿ ಸೈನಿಕರಿಗೆ ಭರವಸೆ ನೀಡಿದರು.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ