ಮೀರಾ ಕುಮಾರ್ ನನ್ನನ್ನ ಹೇಗೆ ನಡೆಸಿಕೊಂಡಿದ್ದರು ನೋಡಿ: ಸುಷ್ಮಾ ಸ್ವರಾಜ್ ಟೀಕೆ

ಭಾನುವಾರ, 25 ಜೂನ್ 2017 (18:53 IST)
ರಾಷ್ಟ್ರಪತಿ ಚುನಾವಣಾ ಕಣ ದಿನದಿಂದ ದಿನಕ್ಕೆ ಕಾವೇರುತ್ತಿದೆ. ಎನ್`ಡಿಎ ಅಭ್ಯರ್ಥಿ ಕೋವಿಂದ್`ಗೆ ಪ್ರತಿಯಾಗಿ ಯುಪಿಎಯಿಂದ ಮೀರಾ ಕುಮಾರ್ ಅವರನ್ನ ಕಂಕ್ಕಿಳಿಸಲಾಗಿದೆ. ಈ ಮಧ್ಯೆ, ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ಮೀರಾ ಕುಮಾರ್ ವಿರುದ್ಧ ಟ್ವಿಟ್ಟರ್`ನಲ್ಲಿ ಕಿಡಿ ಕಾರಿದ್ದಾರೆ.

2013ರ ಸಂಸತ್ ಅಧಿವೇಶನವೊಂದರ ವಿಡಿಯೋ ಪೋಸ್ಟ್ ಮಾಡಿ ಅಂದಿನ ಲೋಕಸಭಾಸ್ಪೀಕರ್ ಆಗಿದ್ದ ಮೀರಾಕುಮಾರ್ ತಮ್ಮನ್ನ ನಡೆಸಿಕೊಂಡ ರೀತಿ ಬಗ್ಗೆ ಟೀಕಿಸಿದ್ದಾರೆ. ಅಂದು ವಿಪಕ್ಷ ನಾಯಕಿಯಾಗಿದ್ದ ಸುಷ್ಮಾ ಸ್ವರಾಜ್, ಯುಪಿಎ ಹಗರಣಗಳ ಬಗ್ಗೆ ಮಾತನಾಡುತ್ತಿದ್ದಾಗ ಸ್ಪೀಕರ್ ಮೀರಾ ಕುಮಾರ್ ಥ್ಯಾಂಕ್ಯೂ ಕುಳಿತುಕೊಳ್ಳಿ ಎಂದು ಭಾಷಣಕ್ಕೆ ಬ್ರೇಕ್ ಹಾಕಲು ಯತ್ನಿಸಿದ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಮತ್ತೊಂದು ವಿಡಿಯೋದಲ್ಲಿ ಸುಷ್ಮಾ ಸ್ವರಾಜ್ ಅವರ 6 ನಿಮಿಷ ಭಾಷಣಕ್ಕೆ 60 ಬಾರಿ ಮೀರಾ ಕುಮಾರ್ ತಡೆಯೊಡ್ಡಿದ್ದಾರೆ.

ಲೋಕಸಭಾ ವಿಪಕ್ಷ ನಾಯಕಿಯನ್ನ ಸ್ಪೀಕರ್ ಹೇಗೆ ನಡೆಸಿಕೊಂಡಿದ್ದರು ನೋಡಿ ಎಂದು ಸುಷ್ಮಾ ಸ್ವರಾಜ್ ಟ್ವಿಟ್ಟರ್`ನಲ್ಲಿ ವಿವರಿಸಿದ್ದಾರೆ. ಜುಲೈ 17ರಂದು ರಪತಿ ಆಯ್ಕೆಗೆ ಚುನಾವಣೆ ನಡೆಯಲಿದೆ.  

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ ಚುಚ್ಚಿಕೊಂಡ

ವೆಬ್ದುನಿಯಾವನ್ನು ಓದಿ